ಅಟ್ಟಿಂಗಲ್ : ಅಟಿಂಗಲ್ ಕ್ಷೇತ್ರದ ಎನ್ ಡಿಎ ಅಭ್ಯರ್ಥಿ ವಿ.ಮುರಳೀಧರನ್ ಪ್ರವಾಸ ವಾಹನÀದ ಮೇಲೆ ದಾಳಿ ನಡೆದಿದೆ. ಬೈಕ್ ನಲ್ಲಿ ಬಂದ ಮೂವರ ತಂಡ ಪ್ರವಾಸಿ ವಾಹನಕ್ಕೆ ನುಗ್ಗಿ ದಾಳಿ ನಡೆಸಿದೆ.
ಘಟನೆಯ ನಂತರ, ಅರ್ಧ ಗಂಟೆ ಪ್ರವಾಸ ಮೊಟಕುಗೊಂಡಿತು. ಪಳ್ಳಿಕಲ್ ಪೋಲೀಸರು ಬಂದ ನಂತರ ಪ್ರವಾಸ ಮುಂದುವರೆಯಿತು.
ಸಿಪಿಎಂ ಮಾಜಿ ಪಂಚಾಯತ್ ಸದಸ್ಯನ ಪುತ್ರನ ನೇತೃತ್ವದಲ್ಲಿ ದಾಳಿ ನಡೆದಿದೆ ಎಂದು ಬಿಜೆಪಿ ಹೇಳಿದೆ. ಪಳ್ಳಿಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಲಗುರಿ ಕೋಟಿಯಂ ಮೂಲೆಯಲ್ಲಿ ಈ ಘಟನೆ ನಡೆದಿದೆ. ಸಂಜೆ 7:30ರ ಸುಮಾರಿಗೆ ಬೈಕ್‍ನಲ್ಲಿ ಬಂದ ಮೂವರ ತಂಡ ಪ್ರವಾಸದ ವಾಹನ ನುಗ್ಗಿ ಜತೆಗಿದ್ದ ಮಹಿಳೆಯರು ಸೇರಿದಂತೆ ಬೈಕ್ ಸವಾರರು ದಾಳಿ ನಡೆಸಿದ್ದು, ಕೇಂದ್ರ ಸಚಿವ ಹಾಗೂ ಅಭ್ಯರ್ಥಿ ವಿ. ಮುರಳೀಧರನ್ ಅವರ ಮೇಲೂ ಅವಾಚ್ಯ ಶಬ್ದಗಳಿಂದ ಹಲ್ಲೆ ನಡೆಸಲಾಗಿದೆ.
ಘಟನೆಯ ನಂತರ ಕೇಂದ್ರ ಸಚಿವ ಹಾಗೂ ಅಟ್ಟಿಂಗಲ್ ಲೋಕಸಭಾ ಕ್ಷೇತ್ರದ ಎನ್‍ಡಿಎ ಅಭ್ಯರ್ಥಿ ವಿ. ಮುರಳೀಧರನ್ ಪ್ರವಾಸವನ್ನು ತಡೆಹಿಡಿದಿದ್ದರು. ಶಾಂತಿ ಕಾಪಾಡುವಂತೆ ಕಾರ್ಯಕರ್ತರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಬಳಿಕ ಪಳ್ಳಿಕಲ್ ಪೋಲೀಸರನ್ನು ಸಂಪರ್ಕಿಸಿದ್ದು, ಬಳಿಕ ಪೋಲೀಸರು ಆಗಮಿಸಿದರು.
ಕೇಂದ್ರ ಸಚಿವರ ಭದ್ರತಾ ಅಧಿಕಾರಿಯೂ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಹಿಂಸಾತ್ಮಕ ಗುಂಪು ಕಲ್ಲರಕೋಣಂ ಜಂಕ್ಷನ್‍ನಲ್ಲೂ ಸಂಘರ್ಷಕ್ಕೆ ಯತ್ನಿಸಿತು. ಸಿಪಿಎಂ ಧ್ವಜ ಹಾರಿಸಿ ಸಂಘರ್ಷ ಸೃಷ್ಟಿಸಲು ಯತ್ನಿಸಲಾಯಿತು. ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವ ಪ್ರಕ್ರಿಯೆ ಆರಂಭಿಸಿರುವುದಾಗಿ ಬಿಜೆಪಿ ಹೇಳಿದೆ. ವೈಫಲ್ಯದ ಭೀತಿಯಿಂದ ದಾಳಿ ನಡೆಸಲು ಯತ್ನಿಸುತ್ತಿದ್ದು, ಬಿಜೆಪಿ ಕಾರ್ಯಕರ್ತರು ಸಂಪೂರ್ಣ ಶಾಂತಿಯುತವಾಗಿರಬೇಕು ಎಂದು ವಿ. ಮುರಳೀಧರನ್ ಹೇಳಿರುವರು.