ಕುಂಬಳೆ: ಜಿಲ್ಲೆಯಲ್ಲಿ ಟೈಲರ್ಸ್ ಸಂಘಟನೆಯ ಸಕ್ರಿಯ ಕಾರ್ಯಕರ್ತರಾಗಿ ಪದಾಧಿಕಾರಿಯಾಗಿ ವಿವಿಧ ಸಾಮಾಜಿಕ, ಸಾಂಸ್ಕøತಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ಅತ್ಯಂತ ಚುರುಕಾಗಿ ಕಾರ್ಯವೆಸಗುತ್ತಿರುವ ಕುಂಬಳೆಯಲ್ಲಿ ಮೋಹನ್ ಟೈಲರ್ಸ್ ಸಂಸ್ಥೆಯನ್ನು ನಡೆಸುತ್ತಿರುವ ಮೋಹನದಾಸ್ ನಾಯ್ಕಾಪು ಅವರ ಕಾರ್ಯವೈಖರಿಯನ್ನು ಪರಿಗಣಿಸಿ ಕೇರಳ ರಾಜ್ಯ ಟೈಲರ್ಸ್ ಅಸೋಸಿಯೇಶನ್‍ನ ರಾಜ್ಯ ಸಮಿತಿಯ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ. ಇದು ಕಾಸರಗೋಡು ಜಿಲ್ಲೆಯ ಎಲ್ಲ ಸಕ್ರಿಯ ಟೈಲರ್ಸ್‍ಗೆ ದೊರೆತ ಮನ್ನಣೆಯಾಗಿದೆ ಎಂದು ಅವರು ಹೇಳಿರುವರು.