30 ವರ್ಷ ದಾಟುತ್ತಿದ್ದಂತೆ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ, ಏಕೆಂದರೆ ಈ ಪ್ರಾಯದ ಬಳಿಕ ಕಾಯಿಲೆಗಳ ಸಂಖ್ಯೆ ಹೆಚ್ಚಾಗುವುದು. ರಕ್ತದೊತ್ತಡ, ಥೈರಾಯ್ಡ್, ಕೊಲೆಸ್ಟ್ರಾಲ್ ಈ ಬಗೆಯ ಸಮಸ್ಯೆ ಹೆಚ್ಚಾಗುವುದು. ಆದ್ದರಿಂದ ಆರೋಗ್ಯದ ಕಡೆಗೆ ತುಂಬಾನೇ ಗಮನಹರಿಸಬೇಕು. ನಮ್ಮ ಆರೋಗ್ಯ ಕಾಪಾಡುವಲ್ಲಿ ನಿಯಮಿತ ರಕ್ತ ಪರೀಕ್ಷೆ ಮಾಸಡಿಸುವುದು ತುಂಬಾ ಒಳ್ಳೆಯದು.
ತಾವೇ ಆಸಕ್ತಿ ತೆಗೆದುಕೊಂಡು ರಕ್ತ ಪರೀಕ್ಷೆ ಮಾಡಿಸುವವರು ತುಂಬಾ ಕಡಿಮೆ. ಏನಾದರೂ ಆರೋಗ್ಯ ಸಮಸ್ಯೆ ಉಂಟಾದಾಗ ವೈದ್ಯರು ಹೇಳಿದಾಗ ರಕ್ತ ಪರೀಕ್ಷೆ ಮಾಡಿಸುವವರೇ ಅಧಿಕ ಅಲ್ಲವೇ? ಕಾಯಿಲೆ ಬಂದು ಚಿಕಿತ್ಸೆ ಮಾಡುವ ಬದಲಿಗೆ ಕಾಯಿಲೆ ಬರುವ ಮುನ್ನವೇ ಮುನ್ನಚ್ಚರಿಕೆವಹಿಸುವುದು ಒಳ್ಳೆಯದು, ಈ ರಕ್ತ ಪರೀಕ್ಷೆಗಳು ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿಯಾಗಿದೆ ನೋಡಿ:ಈ ರಕ್ತ ಪರೀಕ್ಷೆ ಮಾಡುವ 8 ಗಂಟೆ ಮೊದಲು ಉಪವಾಸವಿರಬೇಕು, ಬೆಳಗ್ಗಿನ ಹೊತ್ತು ಬ್ರೇಕ್‌ಫಾಸ್ಟ್‌ಗೆ ಮೊದಲು ಮಾಡಲು ಹೇಳಲಾಗುವುದು, ಇದರಿಂದ 8 ಗಂಟೆಯ ಗ್ಯಾಪ್ ಸಿಗುವುದು. ಈ ಪರೀಕ್ಷೆ ಮಡಿಸುವುದರಿಂದ ಕಿಡ್ನಿ ಆರೋಗ್ಯದ ಬಗ್ಗೆ ತಿಳಿಯಬಹುದು. ಮಧುಮೇಹ, ಎಲೆಕ್ಟ್ರೋಲೈಟ್ಸ್ ಅಸಮತೋಲನ ಉಂಟಾಗಿದ್ದರೆ ತಿಳಿದು ಬರುವುದು.
ಲಿಪಿಡ್ ಪರೀಕ್ಷೆ
ಈ ಪರೀಕ್ಷೆ ಮಾಡುವಾಗ 8 ಗಂಟೆಯಿಂದ ಯಾವುದೇ ಆಹಾರ ಸೇವಿಸಬಾರದು. ಈ ಪರೀಕ್ಷೆ ಮಾಡುವುದರಿಂದ ಕೊಲೆಸ್ಟ್ರಾಲ್ ಬಗ್ಗೆ ತಿಳಿಯಬಹುದು. ಕೆಟ್ಟ ಕೊಲೆಸ್ಟ್ರಾಲ್‌ಎಷ್ಟಿದೆ ಎಂಬುವುದು ಈ ಪರೀಕ್ಷೆಯಿಂದ ತಿಳಿದು ಬರುವುದು.
ಥೈರಾಯ್ಡ್ ಪರೀಕ್ಷೆ
T3, T4, TSH ಪರೀಕ್ಷೆ ಮಾಡುವುದರಿಂದ ಥೈರಾಯ್ಡ್ ಹಾರ್ಮೋನ್ ಸಮತೋಲನದಲ್ಲಿ ಇದೆಯೇ ಎಂದು ತಿಳಿಯಬಹುದು.
T3 ಹಾರ್ಮೋನ್: ಈ ಹಾರ್ಮೋನ್ ಹೃದಯ ಬಡಿತ ನಿಯಂತ್ರಣದಲ್ಲಿಡುತ್ತದೆ ಹಾಗೂ ದೇಹದ ಉಷ್ಣಾಂಶ ಕಾಪಾಡಲು ಸಹಕಾರಿ.
T4: ಇದು ಚಯಪಚಯ ಕ್ರಿಯೆ ಸರಿಯಾಗಿ ನಡೆಯಲು ಸಹಾಯ ಮಾಡುತ್ತದೆ.
ಸಿ ರಿಯಾಕ್ಟಿವ್ ಪ್ರೊಟೀನ್ ಟೆಸ್ಟ್ ( C-Reactive Protien Teast)
ಈ ಪರೀಕ್ಷೆ ಮಾಡುವುದರಿಂದ ಲಿವರ್ ಆರೋಗ್ಯದ ಬಗ್ಗೆ ತಿಳಿಯಬಹುದು. ಅಲ್ಲದೆ ಹೃದಯಾಘಾತದ ಸಾಧ್ಯತೆ ಇದೆಯೇ ಎಂಬುವುದು ಕೂಡ ತಿಳಿಯುತ್ತದೆ. ಇನ್ನು ಕೆಲ ಟೊಇಮ್ಯೂನೆ ಕಾಯಿಲೆ ಇದ್ದರೆ ಕೂಡ ಈ ಪರೀಕ್ಷೆಯಿಂದ ತಿಳಿದು ಬರುವುದು.
ಲೈಂಗಿಕವಾಗಿ ಹರಡುವ ರೋಗ
ಹರ್ಪೀಸ್
ಏಡ್ಸ್
ಹೆಪಟೈಟಿಸ್ ಸಿ
ಇದು ರಕ್ತ ಪರೀಕ್ಷೆ ಮಾಡುವುದರಿಂದ ತಿಳಿದು ಬರುವುದು.
ರಕ್ತ ಪರೀಕ್ಷೆ ಮಾಡಿಸುವುದರಿಂದ ದೊರೆಯುವ ಪ್ರಯೋಜನಗಳು
ನಾವು ರಕ್ತ ಪರೀಕ್ಷೆ ಸುಮ್ಮನೆ ಮಾಡಿಸುವುದರಿಂದ ದುಡ್ಡು ವೇಸ್ಟ್ ಎಂದು ಭಾವಿಸುತ್ತೇವೆ, ಆದರೆ ವಯಸ್ಸಾಗುತ್ತಿದ್ದಂತೆ ಈ ರೀತಿಯ ರಕ್ತ ಪರೀಕ್ಷೆ ತುಂಬಾನೇ ಅವಶ್ಯ. ಈ ಬಗೆಯ ರಕ್ತ ಪರೀಕ್ಷೆ ಮಾಡಿಸುವುದರಿಂದ ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ಬೇಗನೆ ತಿಳಿದು ಬರುವುದು, ಚಿಕಿತ್ಸೆ ಪಡೆದು ಗುಣಮುಖರಾಗಲು ಸಹಾರವಾಗುವುದು.
ಆದರೆ ಕೆಲವೊಂದು ಆರೋಗ್ಯ ಸಮಸ್ಯೆ ಉದಾಹರಣೆಗೆ ಕ್ಯಾನ್ಸರ್ ಪ್ರಾರಂಭದಲ್ಲಿ ಗೊತ್ತಾಗುವುದಿಲ್ಲ, ಕಾಯಿಲೆ ಉಲ್ಬಣವಾದಾಗ ಮಾತ್ರ ತಿಳಿದು ಬರುತ್ತದೆ. ಅದೇ ನಿಯಮಿತ ರಕ್ತ ಪರೀಕ್ಷೆ ಮಾಡುವುದರಿಂದ ಏನಾದರೂ ಸಮಸ್ಯೆಯಿದ್ದರೆ ಬೇಗನೆ ತಿಳಿದು ಬರುವುದು, ಕಾಯಿಲೆ ಹೆಚ್ಚಾಗುವ ಮೊದಲೇ ಚಿಕಿತ್ಸೆ ಪಡೆದು ಗುಣಮುಖರಾಗಬಹುದು.