ಉಪ್ಪಳ: ಬಾಯಾರು ಗ್ರಾಮದ ಚಿಪ್ಪಾರು ಕಣಿಹಿತ್ತಿಲಿನಲ್ಲಿರುವ ಶ್ರೀಮಲರಾಯಿ ಧೂಮಾವತೀ ಪಂಜುರ್ಲಿ ನಾಗ ಪರಿವಾರ ದೈವಸ್ಥಾನದ ನೂತನ ತರವಾಡು ಮನೆಯ ಗೃಹ ಪ್ರವೇಶೋತ್ಸವ ಹಾಗೂ ಸತ್ಯ ಚಾವಡಿಯ ಸಮರ್ಪಣೆ ಮತ್ತು ಪುನರ್ ಪ್ರತಿಷ್ಠಾ ಮಹೋತ್ಸವಕ್ಕೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಿತು.
ಚಿಪ್ಪಾರು ಜೇಷ್ಠರಾಜ ಗಣಪತಿ ಭಜನಾ ಮಂದಿರದ ಪರಿಸರದಿಂದ ಹೊರಟ ಮೆರವಣಿಗೆಯಲ್ಲಿ ಕೊಂಬು ವಾದ್ಯ ಮೇಳಗಳು ಹಾಗೂ ಜೇಷ್ಠರಾಜ ಕುಣಿತ ಭಜನಾ ತಂಡದ ಕುಣಿತ ಭಜನೆ ನಡೆಯಿತು. ಬಳಿಕ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರಿಗೆ ಪೂರ್ಣ ಕುಂಭ ಸ್ವಾಗತ ನೀಡಲಾಯಿತು. ಈ ಸಂದರ್ಭದಲ್ಲಿ ಬಂಬ್ರಾಣ ಧೂಮಾವತೀ ದೈವಸ್ಥಾನದ ನಾರಾಯಣ ಪೂಜಾರಿ ಅವರಿಂದ ಉಗ್ರಾಣ ಮುಹೂರ್ತ ನೇರೆವೇರಿತು. ಬಳಿಕ ಸಾಮೂಹಿಕ ಪ್ರಾರ್ಥನೆಯೊಂದಿಗೆ ವಿವಿಧ ತಾಂತ್ರಿಕ ವೈದಿಕ ವಿದಿ ವಿಧಾನಗಳು ಜರಗಿತು.