ಕೊಟ್ಟಾಯಂ: ಗುರುವಾಯೂರ್-ಮದುರೈ ಎಕ್ಸ್‍ಪ್ರೆಸ್‍ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಹಾವು ಕಚ್ಚಿದೆ. ತೆಂಕಾಶಿ ಮೂಲದ ಕಾರ್ತಿಕ್ (23) ಎಂಬಾತನಿಗೆ ಹಾವು ಕಚ್ಚಿದೆಯೇ ಅಥವಾ ಇಲಿ ಕಚ್ಚಿದೆಯೇ ಎಂಬ ಅನುಮಾನ ಮೂಡಿದೆ.
ಈ ಬಗ್ಗೆರ ಇನ್ನೂ ಖಚಿತ ಮಾಹಿತಿ ಲಭ್ಯವಾಗಿಲ್ಲ. ಕಾರ್ತಿಕ್ ಗೆ ಚಿಕಿತ್ಸೆ ನೀಡಿದ ಕೊಟ್ಟಾಯಂ ವೈದ್ಯಕೀಯ ಕಾಲೇಜು ಅಧಿಕಾರಿಗಳು ಹಾವು ಕಚ್ಚಿರುವುದನ್ನು ಖಚಿತಪಡಿಸಿದ್ದಾರೆ.
ಗುರುವಾಯೂರಿನಿಂದ ಮಧುರೈಗೆ ಹೋಗುತ್ತಿದ್ದ ರೈಲಿನಲ್ಲಿ ಇವರಿಗೆ ಹಾವು ಕಚ್ಚಿದೆ ಎಂಬುದು ಪ್ರಾಥಮಿಕ ಮಾಹಿತಿಯಾಗಿದೆ.
ಬೋಗಿಯಲ್ಲಿದ್ದ ಎಲ್ಲ ಪ್ರಯಾಣಿಕರು, ಅಧಿಕಾರಿಗಳು ತಪಾಸಣೆ ನಡೆಸಿದರೂ ಹಾವು ಪತ್ತೆಯಾಗಿಲ್ಲ ಎಂದು ರೈಲ್ವೆ ಪೋಲೀಸರು ಮಾಹಿತಿ ನೀಡಿದ್ದಾರೆ.