ಕಾಸರಗೋಡು :ಲೋಕಸಭಾ ಚುನಾವಣೆಯ ಅಂಗವಾಗಿ ಕಾಸರಗೋಡು ಲೋಕಸಭಾ ಕ್ಷೇತ್ರದ ಸಾಜನರಲ್ ಒಬ್ಸರ್ವರ್ ಆಗಿ ನಿಯುಕ್ತರಾಗಿರುವ ರಿಶಿರೇಂದ್ರ ಕುಮಾರ್ ಗುರುವಾರ ಜಿಲ್ಲೆಗೆ ಆಗಮಿಸಿದರು. ಹಿರಿಯ ಐಎಎಸ್ ಅಧಿಕಾರಿಯಾಗಿರುವ ಇವರು ಉತ್ತರ ಪ್ರದೇಶ ಸರ್ಕಾರದ ಕೃಷಿ ಇಲಾಖೆಯಲ್ಲಿ ವಿಶೇಷ ಕಾರ್ಯದರ್ಶಿಯಾಗಿದ್ದಾರೆ. ಕಾಸರಗೋಡು ಸರ್ಕಾರಿ ಅತಿಥಿ ಗೃಹದಲ್ಲಿ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ.ಬಿಜೋಯ್, ಸಹಾಯಕ ಜಿಲ್ಲಾಧಿಕಾರಿ ದಿಲೀಪ್ ಕೆ.ಕೈನಿಕರ ಅವರೊಂದಿಗೆ ಚರ್ಚೆ ನಡೆಸಿದರು. ನಂತರ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ತಲುಪಿದ ಅವರನ್ನು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಕೆ.ಇನ್ಬಾಪಾಶೇಖರ್ ಬರಮಾಡಿಕೊಂಡರು. ಈ ಸಂದರ್ಭ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯನ್ನು ರಿಶಿರೇಂದ್ರ ಕುಮಾರ್ ವೀಕ್ಷಿಸಿದರು. ವೀಕ್ಷಕರ ನೋಡಲ್ ಅಧಿಕಾರಿ ಲಿಜೋ ಜೋಸೆಫ್ ಉಪಸ್ಥಿತರಿದ್ದರು. ನಂತರ ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ನಿಯಂತ್ರಣ ಕೊಠಡಿಗೆ ಭೇಟಿ ನೀಡಿದರು. ವೀಕ್ಷಕರು ಕಂಟ್ರೋಲ್ ರೂಮ್‍ನ ನೋಡಲ್ ಅಧಿಕಾರಿ ಹಾಗೂ ಎಡಿಎಂ ಕೆ.ವಿ.ಶ್ರುತಿ, ನೋಡಲ್ ಅಧಿಕಾರಿ ಆದಿಲ್ ಮುಹಮ್ಮದ್ ಹಾಗೂ ನಿಯಂತ್ರಣ ಕೊಠಡಿಯ ಸಿಬ್ಬಂದಿ ಜತೆ ಮಾತುಕತೆ ನಡೆಸಿದರು. ಟೋಲ್ ಫ್ರೀ ಸಂಖ್ಯೆ 1950 ಮೂಲಕ ಬಂದ ಮಾಹಿತಿ ಮತ್ತು ಸಿವಿಜಿಲ್ ಆ್ಯಪ್ ಮೂಲಕ ಬಂದ ದೂರುಗಳ ಬಗ್ಗೆ ವಿಚಾರಿಸಿದರು. ಜನರಲ್ ಒಬ್ಸರ್ವರ್ ಅವರ ದೂರವಾಣಿ ಸಂಖ್ಯೆ 7907671205 ಆಗಿದೆ.