ಎರ್ನಾಕುಳಂ: ಅಂಗಮಾಲಿ ನಗರಸಭೆ ಕಚೇರಿಗೆ ಅನಾಮಧೇಯನಿಂದ ಬಾಂಬ್ ಬೆದರಿಕೆ ಒಡ್ಡಲಾಗಿದೆ. ಅಂಗಮಾಲಿ ಪೋಲೀಸ್ ಠಾಣೆಗೆ ಬೆಳಗ್ಗೆ 11.45ರ ಸುಮಾರಿಗೆ ನಗರಸಭೆ ಕಚೇರಿಯಲ್ಲಿ ಬಾಂಬ್ ಇಡಲಾಗಿದೆ ಎಂದು ದೂರವಾಣಿ ಕರೆ ಬಂದಿತ್ತು.
ಬಳಿಕ ಬಾಂಬ್ ಸ್ಕ್ವಾಡ್ ಹಾಗೂ ಶ್ವಾನ ದಳದ ಪೋಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದರು. ತಪಾಸಣೆ ವೇಳೆ ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ. ಪೋನ್ ಸಂದೇಶ ಬಂದ ಸಂಖ್ಯೆ ಪರಿಶೀಲನೆ ಮೂಲಕ ಮೂಲ ಪತ್ತೆಗೆ ಪ್ರಯತ್ನ ಆರಂಭಿಸಿರುವುದಾಗಿ ಪೋಲೀಸರು ತಿಳಿಸಿದ್ದಾರೆ.