HEALTH TIPS

ದೇಶದ ಜನರು ಅಭಿವೃದ್ಧಿಯ 'ಟ್ರೇಲರ್' ಅಷ್ಟೇ ನೋಡಿದ್ದಾರೆ: ಪ್ರಧಾನಿ ಮೋದಿ

           ಮೀರತ್‌ಈ ಬಾರಿಯ ಲೋಕಸಭಾ ಚುನಾವಣೆಯು ಕೇವಲ ಸರ್ಕಾರ ರಚನೆಗಾಗಿ ಮಾತ್ರ ನಡೆಯುವುದಿಲ್ಲ. ಬದಲಾಗಿ 'ವಿಕಸಿತ ಭಾರತ'ವನ್ನು ನಿರ್ಮಾಣ ಮಾಡುವುದಕ್ಕಾಗಿ ನಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

             ಲೋಕಸಭಾ ಚುನಾವಣಾ ವೇಳಾಪಟ್ಟಿ ಪ್ರಕಟಗೊಂಡ ನಂತರ ಉತ್ತರ ಪ್ರದೇಶದಲ್ಲಿ ತಮ್ಮ ಮೊದಲ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 'ಜನರು ದೇಶದ ಅಭಿವೃದ್ಧಿಯ ಟ್ರೇಲರ್‌ ಅನ್ನು ಮಾತ್ರ ನೋಡಿದ್ದಾರೆ.

               ಮುಂದಿನ ಐದು ವರ್ಷಕ್ಕೆ ಬೇಕಾದ ಮಾರ್ಗಸೂಚಿಯನ್ನು ತಮ್ಮ ಸರ್ಕಾರ ಸಿದ್ಧಪಡಿಸುತ್ತಿದೆ' ಎಂದು ತಿಳಿಸಿದ್ದಾರೆ.

                'ನಮ್ಮ ಸರ್ಕಾರ ಈಗಾಗಲೇ ಮೂರನೇ ಅವಧಿಗೆ ಸಿದ್ಧತೆಗಳನ್ನು ಪ್ರಾರಂಭಿಸಿದೆ. ನಾವು ಮುಂದಿನ ಐದು ವರ್ಷಗಳ ಮಾರ್ಗಸೂಚಿಯನ್ನು ತಯಾರಿಸುತ್ತಿದ್ದೇವೆ. ಮೊದಲ 100 ದಿನಗಳಲ್ಲಿ ನಾವು ಯಾವ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತ ಕೆಲಸಗಳು ವೇಗವಾಗಿ ನಡೆಯುತ್ತಿವೆ' ಎಂದು ಮೋದಿ ಹೇಳಿದ್ದಾರೆ.

             'ಕಳೆದ 10 ವರ್ಷಗಳಲ್ಲಿ, ನೀವು (ಜನರು) ಅಭಿವೃದ್ಧಿಯ ಟ್ರೇಲರ್‌ ಅನ್ನು ಮಾತ್ರ ನೋಡಿದ್ದೀರಿ, ಈಗ ನಾವು ದೇಶವನ್ನು ಇನ್ನೂ ಹೆಚ್ಚು ಮುಂದಕ್ಕೆ ಕೊಂಡೊಯ್ಯಬೇಕಾಗಿದೆ' ಎಂದು ತಿಳಿಸಿದ್ದಾರೆ.

'ನಾನು ಬಡತನದಲ್ಲಿ ಬದುಕಿದ್ದೇನೆ. ಹಾಗಾಗಿಯೇ ಪ್ರತಿಯೊಬ್ಬ ಬಡವರ ದುಃಖ ಮತ್ತು ನೋವು ಮೋದಿಗೆ ಚೆನ್ನಾಗಿ ಅರ್ಥವಾಗುತ್ತದೆ. ಆದ್ದರಿಂದ, ನಾವು ಬಡವರ ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸಲು ಯೋಜನೆಗಳನ್ನು ಕೈಗೊಂಡಿದ್ದೇವೆ. ನಾವು ಬಡವರ ಸಬಲೀಕರಣ ಮಾತ್ರ ಮಾಡಿಲ್ಲ. ಜತೆಗೆ ಬಡವರ ಆತ್ಮ ಗೌರವವನ್ನು ಅವರಿಗೆ ಮರಳಿಸಿದ್ದೇವೆ' ಎಂದು ಅವರು ಪ್ರತಿಪಾದಿಸಿದ್ದಾರೆ.

ಇತ್ತೀಚೆಗೆ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ (ಎನ್‌ಡಿಎ) ಸೇರ್ಪಡೆಗೊಂಡ ರಾಷ್ಟ್ರೀಯ ಲೋಕದಳದ ಅಧ್ಯಕ್ಷ ಜಯಂತ್ ಚೌಧರಿ ಅವರು ರ್‍ಯಾಲಿಯಲ್ಲಿ ಪ್ರಧಾನಿಯೊಂದಿಗೆ ವೇದಿಕೆ ಹಂಚಿಕೊಂಡರು.

                ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಹರಿಯಾಣ ಸಿಎಂ ನಾಯಬ್ ಸಿಂಗ್ ಸೈನಿ ಹಾಗೂ ಮೀರತ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ, ಟಿವಿ ಧಾರಾವಾಹಿ 'ರಾಮಾಯಣ' ಖ್ಯಾತಿಯ ಹಿರಿಯ ನಟ ಅರುಣ್ ಗೋವಿಲ್ ರ್‍ಯಾಲಿಯಲ್ಲಿ ಭಾಗವಹಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries