ಪತ್ತನಂತಿಟ್ಟ: ಶಬರಿಮಲೆ ಶ್ರೀಧರ್ಮಶಾಸ್ತ ದೇವಸ್ಥಾನ ಮೇಷಮಾಸ ಪೂಜೆ ಮತ್ತು ವಿಷು ಉತ್ಸವಗಳಿಗಾಗಿ ತೆರೆಯಲ್ಪಟ್ಟಿದೆ. ಬುಧವಾರ ಸಂಜೆ 5 ಗಂಟೆಗೆ ತಂತ್ರಿ ಕಂಠಾರರ್ ಮಹೇಶ್ ಮೋಹನ್ ಅವರ ಉಪಸ್ಥಿತಿಯಲ್ಲಿ ಮೇಲ್ಶಾಂತಿ ಪಿ.ಎನ್. ಮಹೇಶ ನಂಬೂದಿರಿ ದೀಪ ಬೆಳಗಿಸಿದರು. ಗಣಪತಿ, ನಾಗ ಉಪದೇವತೆ ಗುಡಿಗಳಲ್ಲೂ ದೀಪಾಲಂಕಾರ ಮಾಡಲಾಗಿತ್ತು.
ಭಕ್ತರಿಗೆ ವಿಭೂತಿ ಪ್ರಸಾದ ವಿತರಿಸಲಾಯಿತು. ಯಜ್ಞ ಕುಂಡದಲ್ಲಿ ಅಗ್ನಿ ಬೆಳಗಿದ ಬಳಿಕ ಇರುಮುಡಿ ಹೊತ್ತ ಭಕ್ತರು ಹದಿನೆಂಟನೇ ಮೆಟ್ಟಿಲು ಹತ್ತಿ ಅಯ್ಯಪ್ಪನ ದರ್ಶನ ಪಡೆದರು. ಮಾಳಿಗಪ್ಪುರಂ ಮೇಲ್ಶಾಂತಿ ಮುರಳಿ ನಂಬೂದಿರಿ ಮಾಳಿಗಪ್ಪುರಂ ದೇವಸ್ಥಾನದಲ್ಲಿ ಪ್ರದಕ್ಷಿಣೆ ನಡೆಸಿ ಭಕ್ತರಿಗೆ ಮಂಗಳ ಪ್ರಸಾದ ವಿತರಿಸಿದರು. ಬುಧವಾರ ವಿಶೇಷ ಪೂಜೆಗಳು ಇದ್ದಿರಲಿಲ್ಲ.
ಗುರುವಾರ ಬೆಳಗ್ಗೆ ಐದು ಗರ್ಭಗೃಹದ ಬಾಗಿಲು ತೆರೆಯಲಾಯಿತು. ಬಳಿಕ ತುಪ್ಪಾಭಿಷೇಕ ನಡೆಯಿತು. ಏ.14ರಂದು ಮುಂಜಾನೆ 3 ಗಂಟೆಗೆ ಮೇಷ ಮಾಸದ ಪೂಜೆ ನಡೆಯಲಿದೆ. ನಂತರ ವಿಷುಕಣಿ ದರ್ಶನ. ತಂತ್ರಿ ಮತ್ತು ಮೇಲ್ಶಾಂತಿಗಳು ಭಕ್ತರಿಗೆ ವಿಷು ಪ್ರಸಾದ ವಿತರಿಸುವರು. ಬಳಿಕ ನಿತ್ಯ ಅಭಿಷೇಕ, ತುಪ್ಪದ ಅಭಿಷೇಕ, ಗಣಪತಿ ಹೋಮ ನಡೆಯಲಿದೆ. 18ರಂದು ಗರ್ಭಗೃಹ ಮುಚ್ಚಲಾಗುವುದು.