ಪಾಲಕ್ಕಾಡ್: ರಾಜ್ಯದಲ್ಲಿ ಪ್ರಸ್ತುತ ಲೋಡ್ ಶೆಡ್ಡಿಂಗ್ ಇಲ್ಲ ಎಂದು ವಿದ್ಯುತ್ ಸಚಿವ ಕೆ. ಕೃಷ್ಣನ್ ಕುಟ್ಟಿ ಹೇಳಿದ್ದಾರೆ. ಅಘೋಷಿತ ವಿದ್ಯುತ್ ಕಡಿತವು ಉದ್ದೇಶಪೂರ್ವಕವಾಗಿ ನಡೆಯುತ್ತಿಲ್ಲ, ವಿದ್ಯುತ್ ನ ಅತಿ ಬಳಕೆಯಿಂದ ಉಂಟಾಗುವ ತಾಂತ್ರಿಕ ಸಮಸ್ಯೆ ಇದಕ್ಕೆ ಕಾರಣ. ಬಳಕೆಯ ಮಿತಿಯನ್ನು ಗ್ರಾಹಕರು ಸ್ವಯಂ ನಿಯಂತ್ರಿಸದಿದ್ದರೆ ತೀವ್ರ ವಿದ್ಯುತ್ ಬಿಕ್ಕಟ್ಟು ತಲೆದೋರಲಿದೆ ಎಂದಿರುವರು.
ದೈನಂದಿನ ಬಳಕೆಯು 10.1 ಮಿಲಿಯನ್ ಯುನಿಟ್‍ಗಳನ್ನು ದಾಟಿದೆ. ಹೆಚ್ಚಿನ ವಿದ್ಯುತ್ ಸಂಗ್ರಹಿಸಲಾಗುತ್ತಿದೆ. ದೇಶೀಯ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸದೆ ಬೇರೆ ಪರ್ಯಾಯವಿಲ್ಲ. ಲೋಡ್ ಶೆಡ್ಡಿಂಗ್ ತಪ್ಪಿಸಲು ಸರ್ಕಾರ ತೀವ್ರ ಪ್ರಯತ್ನ ನಡೆಸುತ್ತಿದೆ ಎಂದು ಕೆ. ಕೃಷ್ಣನಕುಟ್ಟಿ ಹೇಳಿದರು. ಹೆಚ್ಚುತ್ತಿರುವ ಲೋಡ್, ತಾಂತ್ರಿಕ ಸಮಸ್ಯೆ ಹಾಗೂ ವಿದ್ಯುತ್ ವೆಚ್ಚ ಕೆಎಸ್‍ಇಬಿಗೆ ತಲೆನೋವಾಗಿ ಪರಿಣಮಿಸುತ್ತಿದೆ. ಇದೇ ವೇಳೆ ಅತಿಯಾದ ವಿದ್ಯುತ್ ಬಳಕೆಯಿಂದಾಗಿ ರಾಜ್ಯದ ಹಲವೆಡೆ ರಾತ್ರಿ ವೇಳೆ ವಿದ್ಯುತ್ ಕಡಿತವಾಗುತ್ತಿದೆ.