ಕಾಸರಗೋಡು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ವಿಧಾನಸಭಾ ಕ್ಷೇತ್ರದ ವಿತರಣಾ ಕೇಂದ್ರಗಳ ಸ್ಟ್ರಾಂಗ್ ರೂಂಗಳಲ್ಲಿ ಇರಿಸಲಾಗಿರುವ ಇವಿಎಂ ಮತ್ತು ವಿವಿಪ್ಯಾಟ್‍ಗಳನ್ನು ಏ.25 ರಂದು ಮತಗಟ್ಟೆಗಳಿಗೆ ಕೊಂಡೊಯ್ಯಲು ಮತಗಟ್ಟೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು.
ಇವಿಯಂಗಳಿಗೆ ಅಭ್ಯರ್ಥಿಗಳ ಹೆಸರು ಮತ್ತು ಚಿಹ್ನೆಯನ್ನು ಅಳವಡಿಸುವ ಪ್ರಕ್ರಿಯೆ ವಿವಿಧ ಕೇಂದ್ರಗಳಲ್ಲಿ ನಡೆಯಿತು. ರಾಜಕೀಯ ಪಕ್ಷದ ಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಪ್ರಕ್ರಿಯೆ ಪೂರ್ತಿಗೊಳಿಸಲಾಯಿತು. ಕಾರ್ಯಾರಂಭದ ಸಮಯದಲ್ಲಿ ಶೇಕಡಾ ಐದು ಇವಿಎಂ ಯಂತ್ರಗಳ ಮೂಲಕ ಅಣಕು ಮತದಾನ ನಡೆಸಲಾಗಿದ್ದು, ಇವುಗಳನ್ನು ನಿರ್ದಿಷ್ಟವಾಗಿ ದಾಖಲಿಸಲಾಗಿದೆ.
ಕಮಿಶನಿಂಗ್ ಪೂರ್ತಿಗೊಳಿಸಲಾದ ಇವಿಎಂ ಯಂತ್ರಗಳನ್ನು ಏಪ್ರಿಲ್ 25 ರಂದು ಮತಗಟ್ಟೆ ಅಧಿಕಾರಿಗಳಿಗೆ ವಿತರಿಸಲಾಗುವುದು. 26ರಂದು ಮತದಾನ ನಡೆಯಲಿದೆ. ಅದೇ ದಿನ ಮತಗಳು ದಾಖಲಾಗಿರುವ ಇವಿಎಂ ಯಂತ್ರಗಳನ್ನು, ವಿತರಿಸಲಾದ ಅದೇ ಕೇಂದ್ರಗಳಲ್ಲೇ ಸ್ವೀಕರಿಸಿ, ಇವಿಎಂ ಯಂತ್ರಗಳನ್ನು ಪೆರಿಯಾ ಕೇರಳ ಸೆಂಟ್ರಲ್ ಯೂನಿವರ್ಸಿಟಿಯಲ್ಲಿ ಇರಿಸಲಾಗುವುದು. ಎಲ್ಲ ಏಳು ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ಪ್ರತ್ಯೇಕ ಸ್ಟ್ರಾಂಗ್ ರೂಂಗಳಲ್ಲಿ ಇರಿಸಲಾಗುವುದು. ಈ ಮತ ಯಂತ್ರಗಳನ್ನು ಏಪ್ರಿಲ್ 26 ರಿಂದ ಜೂನ್ 4 ರವರೆಗೆ ಕೇಂದ್ರ ಸೇನೆ ಮತ್ತು ಕೇರಳ ಸಶಸ್ತ್ರ ಪೆÇಲೀಸ್ ಪಡೆಯ ಭಾರೀ ಭದ್ರತೆಯಲ್ಲಿ ಇರಿಸಲಾಗುತ್ತದೆ. ಈ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾಗಳ ಮೂಲಕ ಸಂಪೂರ್ಣ ನಿಗಾ ಇರಿಸಲಾಗುವುದು.
ಜಿಲ್ಲಾ ಮುಖ್ಯ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಇವಿಎಂ ಕಮಿಶನಿಂಗ್ ಕಾರ್ಯಕ್ಕೆ ಚಾಲನೆ ನೀಡಿದರು. ಕ್ಷೇತ್ರ ಮಟ್ಟದಲ್ಲಿ ಇವಿಎಂ ಕಮಿಷನಿಂಗ್ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಮಂಜೇಶ್ವರ ಕ್ಷೇತ್ರದಲ್ಲಿ ಎಆರ್‍ಒ ಜಗ್ಗಿ ಪೌಲ್, ಕಾಸರಗೋಡು ಕ್ಷೇತ್ರದಲ್ಲಿ ಎಆರ್‍ಒ ಪಿ.ಬಿನುಮೋನ್, ಉದುಮದಲ್ಲಿ ಎಆರ್‍ಒ ನಿರ್ಮಲ್ ರೀಟಾ ಗೋಮಸ್, ಕಾಞಂಗಾಡು ಎಆರ್‍ಓ, ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹಮದ್, ತೃಕರಿಪುರದಲ್ಲಿ ಎಆರ್ ಒ ಪಿ.ಶಾಜು ನೇತೃತ್ವ ವಹಿಸಿದ್ದರು.
ಮಂಜೇಶ್ವರ ಕ್ಷೇತ್ರದಲ್ಲಿ ಕುಂಬಳೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ, ಕಾಸರಗೋಡು ಕ್ಷೇತ್ರದಲ್ಲಿ ಸರ್ಕಾರಿ ಕಾಲೇಜು, ಉದುಮ ಕ್ಷೇತ್ರದಲ್ಲಿ ಚೆಮ್ನಾಡು ಜಮಾ ಅತ್ ಹೈಯರ್ ಸೆಕೆಂಡರಿ ಶಾಲೆ, ಕಾಞಂಗಾಡ್ ಕ್ಷೇತ್ರದ ದುರ್ಗಾ ಹೈಯರ್ ಸೆಕೆಂಡರಿ ಶಾಲೆ, ತ್ರಿಕ್ಕರಿಪುರ ಕ್ಷೇತ್ರದ ಕಾಞಂಗಾಡು ಕುಶಾಲನಗರ ಸ್ವಾಮಿ ನಿತ್ಯಾನಂದ ಆಂಗ್ಲ ಮಾಧ್ಯಮ ಶಾಲೆ, ಪಯ್ಯನ್ನೂರಿನಲ್ಲಿ ಎ. ಕುಞÂರಾಂನ್ ಅಡಿಯೋಡಿ ಸ್ಮಾರಕ ಶಾಲೆ, ಕಲ್ಯಾಶ್ಯೇರಿಯಲ್ಲಿ ಜಿಎಚ್‍ಎಸ್‍ಎಸ್ ಮಾಡಾಯಿಯಲ್ಲಿ ಕಮಿಶನಿಂಗ್ ನಡೆಯಿತು.