ಕಾಸರಗೋಡು: ಚುನಾವಣಾ ಕರ್ತವ್ಯಕ್ಕೆ ನೇಮಕಾತಿ ಆದೇಶ ಪಡೆದ ಎಲ್ಲ ಪ್ರಿಸೈಡಿಂಗ್ ಅಧಿಕಾರಿಗಳು ಹಾಗೂ ಪ್ರಥಮ ಮತಗಟ್ಟೆ ಅಧಿಕಾರಿಗಳು ಏಪ್ರಿಲ್ 2, 3 ಮತ್ತು 4 ರಂದು ನಡೆಯುವ ಮೊದಲ ಹಂತದ ತರಬೇತಿಯಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ತಿಳಿಸಿದ್ದರೆ.
ಮಂಜೇಶ್ವರ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಕುಂಬಳೆ, ಕಾಸರಗೋಡು ಮತ್ತು ಉದುಮ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿಗಳಿಗೆ ಕಾಸರಗೋಡು ಸರ್ಕಾರಿ ಕಾಲೇಜು, ತೃಕರಿಪುರ ಮತ್ತು ಕಾಞಂಗಾಡು ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಕಾಞಂಗಾಡ್ ದುರ್ಗಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ತರಬೇತಿ ನಡೆಯಲಿದೆ. ಪ್ರತಿದಿನ ಬೆಳಗ್ಗೆ 9.30 ಮತ್ತು ಮಧ್ಯಾಹ್ನ 1.30ಕ್ಕೆ ತರಗತಿಗಳನ್ನು ಆಯೋಜಿಸಲಾಗಿದೆ. ಬೆಳಿಗ್ಗೆ 9.30 ಮತ್ತು 1.30 ಕ್ಕೆ ಹಾಜರಾಗುವುದು ಕಡ್ಡಾಯವಾಗಿದೆ. ವಿಳಂಬವಾಗಿ ಆಗಮಿಸುವವರಿಗೆ ತರಬೇತಿಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದಿಲ್ಲ. ಈ ವಿಚಾರದಲ್ಲಿ ಯಾವುದೇ ರಿಯಾಯಿತಿ ಇಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಪೆÇೀಸ್ಟ್ ಆರ್ಡರ್‍ಗಳು 'ಸಂಸ್ಥೆ' ಮತ್ತು 'ಉದ್ಯೋಗಿ ಲಾಗಿನ್‍ಗಳಲ್ಲಿ ಲಭ್ಯವಿದೆ. ಸಂಬಂಧಪಟ್ಟ ಉದ್ಯೋಗಿಗಳಿಗೆ ಎಸ್‍ಎಂಎಸ್ ಸಂದೇಶವನ್ನು ಸಹ ಕಳುಹಿಸಲಾಗುತ್ತದೆ.