ಮಲಪ್ಪುರಂ: ಶೈಕ್ಷಣಿಕ ವರ್ಷದ ಬೀಳ್ಕೊಡುಗೆ ಸಮಾರಂಭದಲ್ಲಿ ವಿದ್ಯಾರ್ಥಿಗಳಿಂದ ದುಬಾರಿ ಉಡುಗೊರೆಗಳನ್ನು ಸ್ವೀಕರಿಸದಂತೆ ಶಿಕ್ಷಕರಿಗೆ ಸೂಚಿಸಲಾಗಿದೆ.
ಈ ಸಂಪ್ರದಾಯ ನಡೆಯಬಾರದು ಎಂದು ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರೇ ಉಪಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು. ನಂತರ ಜಿಲ್ಲೆಯ ಶಾಲೆಗಳಿಗೆ ಸೂಚನೆಗಳನ್ನು ರವಾನಿಸಲಾಗಿದೆ.
ದುಬಾರಿ ಬಟ್ಟೆಗಳು, ಕೈಗಡಿಯಾರಗಳು, ಚೌಕಟ್ಟಿನ ಪೋಟೋಗಳು, ಫೆÇೀಟೋಗಳಿರುವ ಕೇಕ್ ಗಳು, ಪೋಟೋಗಳಿರುವ ಕಪ್ ಗಳು ಇತ್ಯಾದಿ ಯಾವುದೇ ರೀತಿಯ ಉಡುಗೊರೆಗಳನ್ನು ಶಿಕ್ಷಕರು ಸ್ವೀಕರಿಸಬಾರದು. ವμರ್Áಂತ್ಯದ ಕಳುಹಿಸಿ ಕೊಡುವ ಕಾರ್ಯಕ್ರಮಗಳನ್ನು ಈಗ ಅದ್ದೂರಿ ಕಾರ್ಯಕ್ರಮಗಳೊಂದಿಗೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಬಂದ ನಂತರ ಈ ಸಲಹೆ ನೀಡಲಾಗಿದೆ.
ವಿದ್ಯಾರ್ಥಿಗಳು ನೀಡುವ ಉಡುಗೊರೆಗಳನ್ನು ಸ್ವೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮಾಡಿ ಹಂಚುವುದು ಈಗ ವಾಡಿಕೆಯಾಗಿದೆ. ಇದು ಹಿಂದೆ ಖಾಸಗಿ ಶಾಲೆಗಳಲ್ಲಿ ಕಂಡು ಬರುತ್ತಿದ್ದ ಇಂತಹ ಆಚರಣೆ ಈಗ ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೂ ವ್ಯಾಪಿಸಿದೆ. ಗ್ರಾಮೀಣ ಶಾಲೆಗಳಲ್ಲೂ ಇದು ವ್ಯಾಪಕವಾಗಿದೆ.
ಇಂತಹ ಆಚರಣೆಗಳು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಕೀಳರಿಮೆ ಮತ್ತು ಪ್ರತ್ಯೇಕತೆಯನ್ನು ಬೆಳೆಸುತ್ತವೆ ಎಂಬ ಆರೋಪಗಳಿವೆ. ಸರ್ಕಾರಿ ಶಾಲಾ ಶಿಕ್ಷಕರು ಅನುಮತಿಯಿಲ್ಲದೆ ಯಾರಿಂದಲೂ ಯಾವುದೇ ರೀತಿಯ ಉಡುಗೊರೆಗಳನ್ನು ಸ್ವೀಕರಿಸಬಾರದು. ಮತ್ತು ಅವರ ಪರವಾಗಿ ಯಾರೂ ಉಡುಗೊರೆಗಳನ್ನು ಸ್ವೀಕರಿಸಬಾರದು ಎಂಬುದು ನಿಯಮ.