ಚುನಾವಣಾ ಆಯೋಗವು ನೀಡಿರುವ ಗುರುತಿನ ಚೀಟಿಯು ಲೋಕಸಭಾ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಚಲಾಯಿಸಲು ನೀವು ಮತಗಟ್ಟೆಗೆ ತಲುಪಿದಾಗ ನಿಮ್ಮೊಂದಿಗೆ ಕೊಂಡೊಯ್ಯಬೇಕಾದ ದಾಖಲೆಯಾಗಿದೆ.
ಆದರೆ ಈ ಕಾರ್ಡ್ ಹೊಂದಿಲ್ಲದವರು ಚುನಾವಣಾ ಆಯೋಗವು ಸೂಚಿಸಿರುವ ಇತರ 12 ಅನುಮೋದಿತ ಪೋಟೋ ಐಡಿಗಳನ್ನು ಬಳಸಿ ಮತ ಚಲಾಯಿಸಬಹುದು.
ಮತಗಟ್ಟೆಯಲ್ಲಿ ಹಾಜರುಪಡಿಸಬಹುದಾದ ಗುರುತಿನ ದಾಖಲೆಗಳು:
*ಆಧಾರ್ ಕಾರ್ಡ್
* ಎನ್.ಆರ್.ಇ.ಜಿ ಜಾಬ್ ಕಾರ್ಡ್ (ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಜಾಬ್ ಕಾರ್ಡ್)
*ಬ್ಯಾಂಕ್/ಪೋಸ್ಟ್ ಆಫೀಸ್ ನೀಡಿದ ಭಾವಚಿತ್ರವಿರುವ ಪಾಸ್‍ಬುಕ್‍ಗಳು
*ಕಾರ್ಮಿಕ ಸಚಿವಾಲಯದ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್
*ಚಾಲನಾ ಪರವಾನಿಗೆ
* ಪ್ಯಾನ್ ಕಾರ್ಡ್
*ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಅಡಿಯಲ್ಲಿ ಭಾರತದ ರಿಜಿಸ್ಟ್ರಾರ್ ಜನರಲ್ ನೀಡಿದ ಸ್ಮಾರ್ಟ್ ಕಾರ್ಡ್
*ಭಾರತೀಯ ಪಾಸ್ ಪೋರ್ಟ್
*ಪೋಟೋ ಸಹಿತ ಪಿಂಚಣಿ ದಾಖಲೆ
* ಕೇಂದ್ರ ಮತ್ತು ರಾಜ್ಯ ಉದ್ಯೋಗಿಗಳು, ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಸಾರ್ವಜನಿಕ ಲಿಮಿಟೆಡ್ ಕಂಪನಿ ಉದ್ಯೋಗಿಗಳಿಗೆ ನೀಡಲಾದ ಪೊಟೋ ಐಡಿ ಕಾರ್ಡ್
*ಸಂಸತ್ ಸದಸ್ಯರಿಗೆ/ವಿಧಾನ ಸಭೆಗಳ ಸದಸ್ಯರಿಗೆ/ವಿಧಾನ ಪರಿಷತ್ತಿನ ಸದಸ್ಯರಿಗೆ ನೀಡಲಾಗಿರುವ ಅಧಿಕೃತ ಗುರುತಿನ ಚೀಟಿ
*ಅಂಗವಿಕಲರ ಗುರುತಿನ ಚೀಟಿ (ಯುಡಿಐಡಿ ಕಾರ್ಡ್)