HEALTH TIPS

ಭಾರತದ ಧ್ವಜಕ್ಕೆ ಅಗೌರವ: ಕ್ಷಮೆಯಾಚಿಸಿದ ಮಾಲ್ದೀವ್ಸ್ ಮಾಜಿ​ ಸಚಿವೆ ಮರಿಯಮ್

             ವದೆಹಲಿ :ಮಾಲ್ದೀವ್ಸ್‌ನ ಮಾಜಿ ಸಚಿವೆ ಮರಿಯಮ್ ಶಿಯುನಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಭಾರತದ ರಾಷ್ಟ್ರಧ್ವಜವನ್ನು ಅವಮಾನಿಸುವ ಚಿತ್ರವನ್ನು ಹಂಚಿಕೊಂಡು, ಬಳಿಕ ಕ್ಷಮೆಯಾಚಿಸಿದ್ದಾರೆ.

            ಮಾಲ್ದೀವ್ಸ್‌ನ ಆಡಳಿತಾರೂಢ ಪಕ್ಷದ ಮರಿಯಮ್ ವಿರೋಧ ಪಕ್ಷ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ (MDP)ಯನ್ನು ಟೀಕಿಸಲು ಭಾರತ ಧ್ವಜದ ಅಶೋಕ ಚಕ್ರವನ್ನು ಉಲ್ಲೇಖಿಸಿರುವುದು ವಿವಾದಕ್ಕೆ ಕಾರಣವಾಗಿತ್ತು.


              ಸಾಮಾಜಿಕ ಮಾಧ್ಯಮ ಪೋಸ್ಟ್​ನಿಂದ ವಿವಾದ ಉಂಟಾದ ಬಳಿಕ ಎಚ್ಚೆತ್ತುಕೊಂಡ ಮಾಜಿ ಸಚಿವೆ ಕೂಡಲೇ ತಮ್ಮ ಪೋಸ್ಟ್​ ಅನ್ನು ಅಳಿಸಿ ಹಾಕಿ, ಕ್ಷಮೆಯಾಚಿಸಿದ್ದಾರೆ.

          'ನನ್ನ ಇತ್ತೀಚಿನ ಪೋಸ್ಟ್‌ ವಿಷಯದಿಂದ ಉಂಟಾದ ಗೊಂದಲ ಅಥವಾ ಅಪರಾಧಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ' ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

              'ಮಾಲ್ದೀವ್ಸ್‌ನ ವಿರೋಧ ಪಕ್ಷ ಎಂಡಿಪಿ ಬಳಸಲಾದ ಚಿತ್ರವು ಭಾರತೀಯ ಧ್ವಜವನ್ನು ಹೋಲುತ್ತದೆ ಎಂದು ನನ್ನ ಗಮನಕ್ಕೆ ತರಲಾಗಿದೆ. ಇದು ಉದ್ದೇಶಪೂರ್ವಕವಲ್ಲ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಯಾವುದೇ ತಪ್ಪು ತಿಳಿವಳಿಕೆಗೆ ನಾನು ವಿಷಾದಿಸುತ್ತೇನೆ' ಎಂದು ಬರೆದಿಕೊಂಡಿದ್ದಾರೆ.

             ಮಾಲ್ದೀವ್ಸ್‌ ಭಾರತದೊಂದಿಗೆ ಸಂಬಂಧವನ್ನು ಗೌರವಿಸುತ್ತದೆ. ಇನ್ನು ಮುಂದೆ ನಾನು ಪೋಸ್ಟ್‌ ಮಾಡುವ ವಿಷಯಗಳ ಬಗ್ಗೆ ಎಚ್ಚರಿಕೆಯಿಂದ ಇರುತ್ತೇನೆ ಎಂದೂ ಅವರು ಹೇಳಿದ್ದಾರೆ.

ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಮತ ಹಾಕುವಂತೆ ಮನವಿ ಮಾಡುವುದರ ಜೊತೆಗೆ ಎಂಡಿಪಿ ಪೋಸ್ಟರ್‌ನಲ್ಲಿ ಅಶೋಕ ಚಕ್ರ ಹೋಲುವ ಚಿತ್ರಗಳನ್ನು ಬಳಸಿತ್ತು.

                 ಮರಿಯಮ್ ಭಾರತದ ವಿರುದ್ಧ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದ ಕುರಿತು ಅವರು ನೀಡಿದ ಹೇಳಿಕೆ ವಿವಾದ ಸೃಷ್ಟಿಸಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries