ಕೊಚ್ಚಿ: ರಾಜ್ಯದ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಶಾಲೆಗಳಲ್ಲಿ ರಜೆ ತರಗತಿಗಳಿಗೆ ಹೈಕೋರ್ಟ್ ಅನುಮೋದನೆ ನೀಡಿದೆ. ಬೆಳಗ್ಗೆ 7.30ರಿಂದ 10.30ರವರೆಗೆ ತರಗತಿ ನಡೆಸಬಹುದು.
ಕೇರಳ ಶಿಕ್ಷಣ ನಿಯಮಾವಳಿ (ಕೆಇಆರ್) ಕ್ಯಾಲೆಂಡರ್ ಹೊರತುಪಡಿಸಿ ಕಾರ್ಯನಿರ್ವಹಿಸುವ ಶಾಲೆಗಳನ್ನು ಅನುಮತಿಸಲಾಗಿದೆ.
ಆದರೆ ರಜಾ ತರಗತಿಗಳಿಗೆ ಸಂಬಂಧಿಸಿದಂತೆ ಮುಂದೆ ಸರಕಾರ ಹೊರಡಿಸುವ ಆದೇಶಗಳಿಗೆ ಒಳಪಟ್ಟಿರುತ್ತದೆ ಎಂದು ನ್ಯಾಯಮೂರ್ತಿ ಎ. ಮುಹಮ್ಮದ್ ಮುಷ್ತಾಕ್ ಮತ್ತು ನ್ಯಾಯಮೂರ್ತಿ ಎಂಎ ಅಬ್ದುಲ್ ಹಕೀಂ ಅವರನ್ನೊಳಗೊಂಡ ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ.
ಕೇರಳ ಸಿಬಿಎಸ್‌ಇ ಸ್ಕೂಲ್ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್, ಕೌನ್ಸಿಲ್ ಆಫ್ ಸಿಬಿಎಸ್‌ಇ ಸ್ಕೂಲ್ಸ್ ಕೇರಳ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಪರಿಗಣಿಸಿದೆ. ಪೋಷಕರು ಒಪ್ಪಿಗೆ ನೀಡಿದರೆ ರಜೆ ತರಗತಿ ನಡೆಸಬಹುದು ಎಂದು ಈ ಹಿಂದೆ ಹೈಕೋರ್ಟ್‌ನ ಏಕ ಪೀಠ ಆದೇಶಿಸಿತ್ತು. ಈ ಆದೇಶ ಸರಿಯಲ್ಲ ಎಂದು ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.