ರಫಾ : ಗಾಜಾದಲ್ಲಿ ಮನೆಯೊಂದರ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 6 ಮಕ್ಕಳು ಸೇರಿದಂತೆ 9 ಮಂದಿ ಮೃತಪಟ್ಟಿದ್ದಾರೆ.
Israel Hamas War | ಇಸ್ರೇಲ್ ವೈಮಾನಿಕ ದಾಳಿ: ಮಕ್ಕಳು ಸೇರಿ 9 ಮಂದಿ ಸಾವು
0
ಏಪ್ರಿಲ್ 21, 2024
Tags
ರಫಾ : ಗಾಜಾದಲ್ಲಿ ಮನೆಯೊಂದರ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 6 ಮಕ್ಕಳು ಸೇರಿದಂತೆ 9 ಮಂದಿ ಮೃತಪಟ್ಟಿದ್ದಾರೆ.
'ರಫಾ ಸಮೀಪದಲ್ಲಿರುವ ಟೆಲ್ ಸುಲ್ತಾನ್‌ನಲ್ಲಿನ ವಸತಿ ಸಮುಚ್ಛಯದ ಮೇಲೆ ಶುಕ್ರವಾರ ದಾಳಿ ನಡೆದಿದೆ' ಎಂದು ಗಾಜಾದ ರಕ್ಷಣಾ ಪಡೆ ಶನಿವಾರ ತಿಳಿಸಿದೆ.
ರಫಾದ ಆಸ್ಪತ್ರೆಯೊಂದರ ದಾಖಲೆಗಳ ಪ್ರಕಾರ, 6 ಮಕ್ಕಳು, ಇಬ್ಬರು ಮಹಿಳೆಯರು ಮತ್ತು ಪುರುಷರೊಬ್ಬರ ಮೃತದೇಹ ಪತ್ತೆಯಾಗಿದೆ
'ಕಳೆದ 24 ಗಂಟೆಗಳಲ್ಲಿ ಇಸ್ರೇಲ್ ದಾಳಿಯಿಂದಾಗಿ 37 ಮಂದಿ ಮೃತಪಟ್ಟಿದ್ದು, 68 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇತ್ತೀಚಿನ ಲೆಕ್ಕಾಚಾರದ ಪ್ರಕಾರ ಇಸ್ರೇಲ್-ಹಮಾಸ್ ಯುದ್ಧದಲ್ಲಿ ಈವರೆಗೆ ಪ್ಯಾಲೆಸ್ಟಿನ್‌ನ 34,049 ಮಂದಿ ಮೃತಪಟ್ಟಿದ್ದು, 76,901 ಮಂದಿ ಗಾಯಗೊಂಡಿದ್ದಾರೆ ' ಎಂದು ಗಾಜಾದ ಆರೋಗ್ಯ ಇಲಾಖೆ ಶನಿವಾರ ತಿಳಿಸಿದೆ.