ಇಂಫಾಲ್: ಮಣಿಪುರದಲ್ಲಿ ಶುಕ್ರವಾರ ಮತದಾನದ ವೇಳೆ ಅಹಿತಕರ ಘಟನೆ ನಡೆದ 47 ಮತಗಟ್ಟೆಗಳಲ್ಲಿ ಮರು ಮತದಾನ ನಡೆಸುವಂತೆ ಕಾಂಗ್ರೆಸ್ ಪಕ್ಷ ಆಗ್ರಹಿಸಿದೆ.
ಇಂಫಾಲ್: ಮಣಿಪುರದಲ್ಲಿ ಶುಕ್ರವಾರ ಮತದಾನದ ವೇಳೆ ಅಹಿತಕರ ಘಟನೆ ನಡೆದ 47 ಮತಗಟ್ಟೆಗಳಲ್ಲಿ ಮರು ಮತದಾನ ನಡೆಸುವಂತೆ ಕಾಂಗ್ರೆಸ್ ಪಕ್ಷ ಆಗ್ರಹಿಸಿದೆ.
ಮಣಿಪುರದ ಇನ್ನರ್ ಮಣಿಪುರ ಮತ್ತು ಔಟರ್ ಮಣಿಪುರ ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ಮತದಾನ ನಡೆದಿದೆ. ಎರಡು ಕಡೆ ಮತಗಟ್ಟೆ ಬಳಿ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದರು.
'ಇನ್ನರ್ ಮಣಿಪುರದ 36 ಮತಗಟ್ಟೆಗಳು ಮತ್ತು ಔಟರ್ ಮಣಿಪುರದ 11 ಮತಗಟ್ಟೆಗಳಿಗೆ ಮರು ಮತದಾನ ನಡೆಸುವಂತೆ ಕೋರಿ ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗಿದೆ' ಎಂದು ಮಣಿಪುರ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಕೆ.ಮೇಘಚಂದ್ರ ಶನಿವಾರ ಹೇಳಿದರು.