ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿರುವ ಹೆಚ್ಚಿನ ಭದ್ರತೆಯಿರುವ ಪ್ರದೇಶಗಳಲ್ಲಿ ಒಂದಾಗಿರುವ ರೈಸಿನಾ ಹಿಲ್ಸ್‌ನಲ್ಲಿರುವ ಗೃಹ ವ್ಯವಹಾರಗಳು ಮತ್ತು ಸಿಬ್ಬಂದಿ ಸಚಿವಾಲಯಗಳನ್ನು ಹೊಂದಿರುವ ನಾರ್ತ್ ಬ್ಲಾಕ್‌ನಲ್ಲಿ ಮಂಗಳವಾರ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆದರೆ ಯಾರೂ ಗಾಯಗೊಂಡಿಲ್ಲ, ಯಾವುದೇ ಕಡತಕ್ಕೂ ಹಾನಿಯಾಗಿಲ್ಲ ಎಂದು ಗೃಹ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ಕಟ್ಟಡದ ಎರಡನೇ ಮಹಡಿಯ ವಿದ್ಯುತ್ ಉಪಕರಣಗಳಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಸಿಐಎಸ್‌ಎಫ್, ಸಿಪಿಡಬ್ಲ್ಯೂಡಿ ಮತ್ತು ದೆಹಲಿ ಅಗ್ನಿಶಾಮಕ ಸೇವೆಗಳ ಜಂಟಿ ಕಾರ್ಯಾಚರಣೆಯಿಂದ 20 ನಿಮಿಷಗಳಲ್ಲಿ ಬೆಂಕಿಯನ್ನು ನಂದಿಸಲಾಗಿದೆ.