ನವದೆಹಲಿ: ಆನ್‌ಲೈನ್ ಆಹಾರ ಡೆಲಿವರಿ ಆಯಪ್ ಸ್ವಿಗ್ಗಿ 'Paw-ternity' ನೀತಿಯನ್ನು ಪರಿಚಯಿಸಿದ್ದು, ಸಾಕುಪ್ರಾಣಿಗಳ ಆರೈಕೆ ಮತ್ತು ದತ್ತು ಪಡೆಯುವಲ್ಲಿ ಉದ್ಯೋಗಿಗಳಿಗೆ ಬೆಂಬಲ ನೀಡುವುದಾಗಿ ಹೇಳಿದೆ.
ನವದೆಹಲಿ: ಆನ್‌ಲೈನ್ ಆಹಾರ ಡೆಲಿವರಿ ಆಯಪ್ ಸ್ವಿಗ್ಗಿ 'Paw-ternity' ನೀತಿಯನ್ನು ಪರಿಚಯಿಸಿದ್ದು, ಸಾಕುಪ್ರಾಣಿಗಳ ಆರೈಕೆ ಮತ್ತು ದತ್ತು ಪಡೆಯುವಲ್ಲಿ ಉದ್ಯೋಗಿಗಳಿಗೆ ಬೆಂಬಲ ನೀಡುವುದಾಗಿ ಹೇಳಿದೆ.
'ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಗಿರೀಶ್ ಮೆನನ್, 2020ರಲ್ಲಿ ಲಿಂಗ ಸಮಾನತೆ ಪೋಷಣೆ ನೀತಿಯನ್ನು ಪರಿಚಯಿಸಲಾಗಿತ್ತು.
ಏಪ್ರಿಲ್ 11, ರಾಷ್ಟ್ರೀಯ ಸಾಕುಪ್ರಾಣಿಗಳ ದಿನದಂದು ಇದನ್ನು ಪರಿಚಯಿಸಲಾಗಿದೆ. ಈ ನೀತಿ ಅಡಿಯಲ್ಲಿ ನೌಕರರು ತಮ್ಮ ಸಾಕುಪ್ರಾಣಿಯನ್ನು ಮನೆಗೆ ಸ್ವಾಗತಿಸಲು, ವೇತನದೊಂದಿಗೆ ಹೆಚ್ಚುವರಿ ರಜೆಗೆ ಅರ್ಹರಾಗಿರುತ್ತಾರೆ.
ಪಾಲಕರೊಂದಿಗೆ ಸಾಕುಪ್ರಾಣಿ ಹೊಂದಿಕೊಳ್ಳಲು ಬೇಕಾಗಿರುವ ಅವಧಿಯಲ್ಲಿ ನೌಕರರಿಗೆ 'ವರ್ಕ್-ಫ್ರಮ್-ಹೋಮ್' ಆಯ್ಕೆಯನ್ನು ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಇದಲ್ಲದೆ, ಸಾಕು ಪ್ರಾಣಿಗಳಿಗೆ ವ್ಯಾಕ್ಸಿನೇಷನ್ ಅಥವಾ ಅನಾರೋಗ್ಯ ಸಂದರ್ಭಗಳಲ್ಲಿ ಹಾಗೂ ಗಾಯಗೊಂಡ ಸಾಕುಪ್ರಾಣಿಗಳನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲು ಸಾಮಾನ್ಯ ರಜೆ ಅಥವಾ ಅನಾರೋಗ್ಯ ರಜೆಯನ್ನು ಬಳಸಬಹುದು. ತಮ್ಮ ಸಾಕುಪ್ರಾಣಿಗಳನ್ನು ನೋಡಿಕೊಳ್ಳಲು ಅಗತ್ಯವಿರುವ ಸಮಯವನ್ನು ನೌಕರರು ತೆಗೆದುಕೊಳ್ಳಲು ಈ ನೀತಿಯು ಅನುಮತಿಸುತ್ತದೆ ಎಂದು ಮೆನನ್ ಹೇಳಿದ್ದಾರೆ.
ಸಾಕುಪ್ರಾಣಿಗಳು ಮೃತಪಟ್ಟ ಸಂದರ್ಭದಲ್ಲಿ ಆ ದುಃಖದಿಂದ ಹೊರಬರಲು ಮತ್ತು ಚೇತರಿಸಿಕೊಳ್ಳಲು ಅಗತ್ಯವಿರುವ ಸಮಯವನ್ನು ಒದಗಿಸಲು ಉದ್ಯೋಗಿಗಳಿಗೆ ವಿಯೋಗ ರಜೆಯನ್ನು ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.