ನವದೆಹಲಿ: ಅಶ್ಲೀಲ ಮತ್ತು ಅಸಂಬದ್ಧ ಕಂಟೆಂಟ್‌ಗಳನ್ನು ಪ್ರದರ್ಶಿಸಲಾಗುತ್ತಿದೆ ಎಂದು ಆರೋಪಿಸಿ ಪ್ರಮುಖ ಒಟಿಟಿ ವೇದಿಕೆಗಳಿಗೆ ನಿರ್ಬಂಧ ವಿಧಿಸಲು ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಸರ್ಕಾರಕ್ಕೆ ಮನವಿ ಮಾಡುವಂತೆ ಸೂಚಿಸಿದೆ.

ಓಟಿಟಿ ವೇದಿಕೆಗಳಲ್ಲಿ ಅಶ್ಲೀಲ ಮತ್ತು ಅಸಂಬದ್ಧ ಕಂಟೆಂಟ್‌ಗಳನ್ನು ಎಲ್ಲ ವಯೋಮಿತಿಯ ಜನರು ನೋಡಲು ಅನುವಾಗುವಂತೆ ಸಾರ್ವಜನಿಕವಾಗಿ ಬಿತ್ತರಿಸಬಹುದೇ ಎಂದು ಪ್ರಶ್ನಿಸಿದ್ದ ಅರ್ಜಿದಾರನ ಪರ ವಕೀಲರಿಗೆ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಸಂದೀಪ್ ಮೆಹ್ತಾ ನೇತೃತ್ವದ ಪೀಠ ಈ ರೀತಿ ಹೇಳಿದೆ.
'ವೀಕ್ಷಕರ ನಿಯಂತ್ರಣದ ಕುರಿತಂತೆ ಕೆಲವು ನಿರ್ದೇಶನ ನೀಡುವಂತೆ ನೀವು ಕೋರುತ್ತಿದ್ದೀರಾ? ಹಾಗಿದ್ದರೆ ನೀವು ಸರ್ಕಾರಕ್ಕೆ ಮನವಿ ಸಲ್ಲಿಸಿ, ಸೆನ್ಸಾರ್ ಮಂಡಳಿ ಬಳಿ ಹೋಗಿ' ಎಂದು ಪೀಠ ಹೇಳಿದೆ.
ಈ ನಡುವೆ ಸರ್ಕಾರಕ್ಕೆ ಮನವಿ ಸಲ್ಲಿಸಲು ಸುಪ್ರೀಂ ಕೋರ್ಟ್ ಅನುಮತಿ ಮೇರೆಗೆ ಅರ್ಜಿದಾರರು ಅರ್ಜಿ ವಾಪಸ್ ಪಡೆದಿದ್ದಾರೆ.
ಸರ್ಕಾರಕ್ಕೆ ಮನವಿ ಸಲ್ಲಿಸಿದರೆ ಕಾನೂನಿನ ಮೂಲಕ ತಿದ್ದುಪಡಿ ತರಬಹುದು ಎಂದು ನ್ಯಾಯಾಲಯ ಹೇಳಿದೆ.
ಅರ್ಜಿಯಲ್ಲಿ ಚಲನಚಿತ್ರಗಳ ಬಗ್ಗೆ ಪ್ರಶ್ನೆ ಎತ್ತಲಾಗಿದೆಯೇ ಎಂದು ನ್ಯಾಯಪೀಠ ಕೇಳಿದ್ದು, ಇಲ್ಲ ಒಟಿಟಿ ವೇದಿಕೆಗಳಲ್ಲಿ ಪ್ರದರ್ಶಿಸುತ್ತಿರುವ ಅಶ್ಲೀಲತೆ ಬಗ್ಗೆ ಪ್ರಶ್ನೆ ಇದೆ ಎಂದು ವಕೀಲರು ಉತ್ತರಿಸಿದ್ದಾರೆ.