ಛತ್ರಪತಿ ಸಾಂಭಾಜಿನಗರ್(ಮಹಾರಾಷ್ಟ್ರ): ಮಹಾರಾಷ್ಟ್ರದ ಛತ್ರಪತಿ ಸಾಂಭಾಜಿನಗರದ ಹರ್ಸೂಲ್ ಕೇಂದ್ರ ಕಾರಾಗೃಹದ 650 ಕೈದಿಗಳಿಗೆ ತಮ್ಮ ಕುಟುಂಬ ಸದಸ್ಯರು ಮತ್ತು ವಕೀಲರ ಜೊತೆ ಸಂಪರ್ಕದಲ್ಲಿರಲು ಸ್ಮಾರ್ಟ್ ಕಾರ್ಡ್ ವಿತರಿಸಲಾಗಿದೆ ಎಂದು ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸ್ಮಾರ್ಟ್ ಕಾರ್ಡ್ ವಾರದಲ್ಲಿ ಮೂರು ಬಾರಿ ಉಚಿತ ಕರೆ ಮಾಡಲು ಅವಕಾಶ ಮಾಡಿಕೊಡುತ್ತದೆ. ಒಮ್ಮೆ ಕರೆ ಮಾಡಿದರೆ 6 ನಿಮಿಷಗಳವರೆಗೆ ಮಾತನಾಡಬಹುದಾಗಿದೆ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
'ಆರ್ಥಿಕ ಮುಗ್ಗಟ್ಟಿನ ಕಾರಣ ಹಲವು ಕೈದಿಗಳ ಕುಟುಂಬಸ್ಥರು ಜೈಲಿಗೆ ಭೇಟಿ ನೀಡಲು ಸಾಧ್ಯವಿಲ್ಲ. ಹಾಗಾಗಿ, ಕೈದಿಗಳು ಅವರ ಕುಟುಂಬದವರು, ವಕೀಲರ ಜೊತೆ ಸಂಪರ್ಕದಲ್ಲಿರಲು ಹರ್ಸೂಲ್ ಜೈಲಿನ 650 ಕೈದಿಗಳಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲಾಗಿದೆ' ಎಂದು ಪ್ರಕಟಣೆ ತಿಳಿಸಿದೆ.
ಆದರೆ, ಜೈಲಿನ ಅಧಿಕಾರಿಗಳ ಜೊತೆ ಹಂಚಿಕೊಳ್ಳಲಾದ ಸಂಖ್ಯೆಗಳಿಗೆ ಮಾತ್ರ ಕರೆ ಮಾಡಲು ಅವಕಾಶವಿದೆಯೇ ಅಥವಾ ಬೇರೆ ಸಂಖ್ಯೆಗಳಿಗೂ ಕರೆ ಮಾಡಬಹುದೇ ಎಂಬ ಬಗ್ಗೆ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿಲ್ಲ. ಜೈಲಿನ ಆವರಣದಲ್ಲಿ ಕಾಲಿಂಗ್ ಬೂತ್‌ಗಳ ವ್ಯವಸ್ಥೆ ಮಾಡಲಾಗಿದೆ.