ತಿರುವನಂತಪುರಂ: ಶಿಕ್ಷಣ ಇಲಾಖೆ ರಜಾ ಕಾಲದ ತರಗತಿಗಳಿಗೆ ನಿಷೇಧ ಹೇರಿದೆ. ರಾಜ್ಯ ಪಠ್ಯಕ್ರಮದಡಿ ಶಾಲೆಗಳಲ್ಲಿ ರಜೆ ತರಗತಿ ನಡೆಸಬಾರದು ಎಂದು ಸೂಚಿಸಲಾಗಿದೆ.
ರಜೆಯ ತರಗತಿಗಳಿಗೆ ಹಣ ಸಂಗ್ರಹಿಸುವುದನ್ನು ಸಹ ನಿಷೇಧಿಸಲಾಗಿದೆ. ಈ ಬಗ್ಗೆ ಪಾಲಕರು ಹಾಗೂ ವಿದ್ಯಾರ್ಥಿಗಳಿಂದ ಸಾಕಷ್ಟು ದೂರುಗಳು ಬರುತ್ತಿವೆ ಎಂದು ಸಚಿವ ವಿ.ಶಿವನ್ ಕುಟ್ಟಿ ತಿಳಿಸಿದರು.
ರಾಜ್ಯದಲ್ಲಿ ಪ್ರಸ್ತುತ ಬೇಸಿಗೆ ಭೀಕರವಾಗಿದೆ. ಮಕ್ಕಳು ಅಸಹನೀಯ ಶಾಖದಲ್ಲಿದ್ದಾರೆ. ಇದು ಮಕ್ಕಳಲ್ಲಿ ಮಾನಸಿಕ ಮತ್ತು ದೈಹಿಕ ತೊಂದರೆಗಳನ್ನು ಉಂಟುಮಾಡಬಹುದು. ಹಾಗಾಗಿ ರಜೆ ತರಗತಿಗಳಿಗೆ ಅವಕಾಶವಿಲ್ಲ ಎಂದು ಸಚಿವರ ಅಭಿಪ್ರಾಯ ವ್ಯಕ್ತಪಡಿಸಿರುವರು.
ಪಾಲಕರು ಮತ್ತು ವಿದ್ಯಾರ್ಥಿಗಳು ತಾವಾಗಿಯೇ ಶೈಕ್ಷಣಿಕ ಮತ್ತು ಶೈಕ್ಷಣಿಕೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರೆ ಇದರಲ್ಲಿ ಯಾವುದೇ ರೀತಿಯ ನಿಯಂತ್ರಣ ತರುವ ಉದ್ದೇಶವಿಲ್ಲ ಎಂದು ಸಚಿವ ಶಿವನ್ ಕುಟ್ಟಿ ತಿಳಿಸಿದರು.