HEALTH TIPS

WhatsApp Green: ಭಾರತದಲ್ಲಿ ಒಂದಿಷ್ಟು ಬಳಕೆದಾರರ ವಾಟ್ಸಾಪ್ ಹಸಿರಾಗಿದೆ, ಇದಕ್ಕೆ ಕಾರಣವೇನು!

 ಪಂಚದಾದ್ಯಂತ ಹೆಚ್ಚು ಬಳಸಲ್ಪಡುವ ಸರಳ ಮತ್ತು ಹೇರಳ ಅಪ್ಲಿಕೇಶನ್‌ಗಳಲ್ಲಿ ಒಂದಾಗಿರುವ ವಾಟ್ಸಪ್ (WhatsApp) ಈಗ ಹೊಸ ಬದಲಾವಣೆಗಳನ್ನು ಹೊರತಂದಿದೆ. ಈ ಫೀಚರ್ ಅಥವಾ ಅಪ್ಡೇಟ್ ಎಷ್ಟೇ ಚಿಕ್ಕದಾಗಿದ್ದರೂ ನಮ್ಮ ಗಮನಕ್ಕೆ ಬಂದೆ ಬರುತ್ತದೆ. ಅಲ್ಲದೆ ಈಗಾಗಲೇ ಇದರ ಬಗ್ಗೆ ಟ್ವಿಟ್ಟರ್‌ನಲ್ಲಿ ಹೊಸ ಲುಕ್ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ. ಅಲ್ಲದೆ ಈ ಹೊಸ WhatsApp Green ಫೀಚರ್ ಪ್ರಸ್ತುತ ಎಲ್ಲರಿಗು ಲಭ್ಯವಿಲ್ಲ ನಿಮಗೆ ಈ ಅಪ್ಡೇಟ್ ಸಿಕ್ಕಿಲ್ಲವೆಂದರೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ.

ಬಳಕೆದಾರರಿಗೆ ಅರಿವಿಲ್ಲದೆ WhatsApp Green ಬಣ್ಣಕ್ಕೆ ತಿರುಗುತ್ತಿದೆ

ಇತ್ತೀಚಿಗೆ ಭಾರತದಲ್ಲಿನ ಬಳಕೆದಾರರು ಹೊಸ ಅಪ್ಡೇಟ್ ಸ್ವೀಕರಿಸಿದ್ದು ಭಾರತದಲ್ಲಿ ಒಂದಿಷ್ಟು ಬಳಕೆದಾರರ ವಾಟ್ಸಾಪ್ ಹಸಿರಾಗಿದೆ (WhatsApp Green). ಇದಕ್ಕೆ ಕಾರಣವೇನು ತಿಳಿಯೋಣ. ಭಾರತದಲ್ಲಿನ iOS ಬಳಕೆದಾರರು WhatsApp ಹೊಸ ಅಪ್ಡೇಟ್ ಪಡೆಯುತ್ತಿದ್ದಾರೆ. ಇದರಲ್ಲಿ ಇಂಟರ್ಫೇಸ್ ಸಾಮಾನ್ಯ ನೀಲಿ ಬಣ್ಣದ ಬದಲಾಗಿ ಹಸಿರು-ಥೀಮ್ (WhatsApp Green) ಪೂರ್ತಿಯಾಗಿ ಕಾಣುತ್ತದೆ. ಆಂಡ್ರಾಯ್ಡ್ ಡಿವೈಸ್ಗಳಲ್ಲಿ ಈ WhatsApp ಈವರೆಗೆ ಕೇವಲ ಹಸಿರು ಇಂಟರ್ಫೇಸ್ ಅನ್ನು ಮಾತ್ರ ಹೊಂದಿರುವುದನ್ನು ಕಂಡಿರಬಹುದು.

ಆದರೆ ಐಫೋನ್‌ಗಳಲ್ಲಿ ಬಣ್ಣವು ರೋಮಾಂಚಕ ನೀಲಿ ಬಣ್ಣದ್ದಾಗಿತ್ತು. ಅಲ್ಲದೆ ಸ್ಟೇಟಸ್ ಲಿಸ್ಟ್ ಚಾಟ್-ಪಟ್ಟಿ ವಿಂಡೋದವರೆಗೆ ಎಲ್ಲವೂ ಹೊಸ ವಿನ್ಯಾಸ ಬದಲಾವಣೆಗೆ ತಿರುಗಿದೆ. ಇದನ್ನು ಕಂಡು ನೀವು ನಿಮ್ಮ ಫೋನ್ ಕೆಟ್ಟೋಗಿದೆ ಅಥವಾ ಸೆಟ್ಟಿಂಗ್ ಬದಲಾಗಿದೆ ಎಂದು ಚಿಂತಿಸಬೇಡಿ. ಯಾಕೆಂದರೆ WhatsApp ಲೇಟೆಸ್ಟ್ ಮತ್ತು ಹೊಸ ಮಾದರಿಯ ಅನುಭವವನ್ನು ನೀಡಲು ಮತ್ತು ಮತ್ತಷ್ಟು ಸುಲಭವಾಗಿಸಲು ಈ ಹೊಸ ಬದಲಾವಣೆಗಳನ್ನು ತಾನೇ ಮಾಡಲಾಗಿದೆ ಎಂದು ಮೆಟಾ ಕಂಪನಿ ಹೇಳಿದೆ.

ವಾಟ್ಸಾಪ್ ಪೂರ್ತಿ ಥಿಮ್ ಹಸಿರಾಗಲು ಕಾರಣವೇನು!

ಈಗಾಗಲೇ ಹೇಳಿದಂತೆ ಬದಲಾವಣೆಯು ಈ ವರ್ಷದ ಆರಂಭದಲ್ಲಿ ಬಳಕೆದಾರರಿಗೆ ಹೊರಹೊಮ್ಮಲು ಪ್ರಾರಂಭಿಸಿತು ಆದರೆ ಈಗ ಹೆಚ್ಚಿನ ಜನರನ್ನು ತಲುಪಿದೆ. ಐಕಾನ್‌ಗಳ ಜೊತೆಗೆ ಅಪ್ಲಿಕೇಶನ್‌ನಲ್ಲಿ ಹಂಚಿಕೊಳ್ಳಲಾದ ಲಿಂಕ್‌ಗಳು ಸಹ ಸಾಮಾನ್ಯ ನೀಲಿ ಬಣ್ಣಕ್ಕೆ ಬದಲಾಗಿ ಹಸಿರು ಬಣ್ಣವನ್ನು ಹೊಂದಿರುತ್ತವೆ. ಇದರಲ್ಲಿ ಬಳಕೆದಾರರಿಗೆ ಸ್ಪೇಸಿಂಗ್, ಬಣ್ಣಗಳು, ಐಕಾನ್‌ಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಹೊಸ ಅಪ್ಲಿಕೇಶನ್ ಮಾದರಿಯಲ್ಲಿ ಕಾಣುವುದು ಬಳಕೆದಾರರಿಗೆ ಒಂದಿಷ್ಟು ಹೆಚ್ಚಿನ ಆಕರ್ಷಣೆ ಮತ್ತು ಸೆಳೆತವನ್ನು ನೀಡುವುದಾಗಿ ಕೆಲವು ಬದಲಾವಣೆಗಳನ್ನು ಮಾಡಿದೆಯಂತೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries