HEALTH TIPS

ಬೇಕಲ ರಾಮ ನಾಯಕರು ಬರೆದ ಐತಿಹಾಸಿಕ ಪ್ರಸಂಗ: ಕುಂಬಳೆಯ ಜಯಸಿಂಹ ರಾಜ: ಭಾಗ-01

                   


                 ಕಾಸರಗೋಡು ತಾಲೂಕಿನ ತಳಂಗರೆ ಎಂಬಲ್ಲಿ ದೊರೆತ ಒಂದು ಶಿಲಾ ಶಾಸನವು ಕ್ರಿಸ್ತಶಕ ಹತ್ತನೇ ಶತಮಾನಕ್ಕೆ ಸಂಬಂಧಿಸಿದ್ದೆಂದು ಶಾಸನ ಶಖೆಯವರು ತೀರ್ಮಾನಿಸಿದ್ದಾರೆ. ಇದರಲ್ಲಿ ಹೇಳಲ್ಪಟ್ಟಿರುವ ಅರಸನು ಕುಂಬಳೆ ಸೀಮೆಯನ್ನು ಆಳುತ್ತಿದ್ದನೆಂದು ತಿಳಿಯಬಹುದು. ಇವನು ಪುತ್ತೂರು(ಮೊಗ್ರಾಲ್ ಪುತ್ತೂರು) ಎಂಬಲ್ಲಿ ಕನ್ಯಾದಾನವಾಗಿ ಮೋಚಬ್ಬರಸಿ ಎಂಬವಳಿಗೆ ಭೂಮಿಯನ್ನು ಬಿಟ್ಟಂತೆ ತಿಳಿಯುತ್ತದೆ.

                 ಈ ಮೋಚಬ್ಬರಸಿಯು ಶಿಲಾಮಯವಾದ ಈ ಗುಡ್ಡ ಪ್ರದೇಶವನ್ನು ಫಲವತ್ತಾದ ಭೂಮಿಯನ್ನಾಗಿ ಮಾರ್ಪಡಿಸಿದಳು. ವಾಸಕ್ಕೆ ಒಂದು ಮನೆಯನ್ನು ಕಟ್ಟಿಸಿ, ಕೆರೆತಟಾಕಗಳನ್ನು  ಸವೆಸಿ, ಅಂದವಾದ ತೋಟವನ್ನು ನಿರ್ಮಿಸಿದಳು. ಈ ಪ್ರದೇಶದ ಸುತ್ತಲೂ ಒಂದು ಕಂದಕನನ್ನು ತೋಡಿಸಿದಳು.


                    ಈ ಶಾಸನದ ಒಕ್ಕಣೆಯ ಅಂತ್ಯಭಾಗವು ಸ್ವಾರಸ್ಯವಾಗಿದೆ. ದಾನವಾಗಿತ್ತ ಈ ಭೂಮಿಯ ಒಡೆತನವು ಪಾರಂಪರ್ಯವಾಗಿ ಜೋಗವ್ವೆ ಎಂಬವಳ ಕುಟುಂಬದಲ್ಲಿ ಹೆಣ್ಣಿನ ಮೂಲಕ ಬರಬೇಕೆಂದು ಲಿಖಿತವಾಗಿದೆ. ಈ ಒಕ್ಕಣೆಯು ಅಳಿಯ ಸಂತಾನದ ನಿರ್ಧಿಷ್ಟ ಸೂಚನೆಯೋ ಏನೋ ಎಂಬ ಅನುಮಾನವನ್ನು ವ್ಯಕ್ತಪಡಿಸಬೇಕಾಗುತ್ತದೆ. ಆದರೆ ಅಳಿಯ ಸಂತಾನ ಕ್ರಮ ಪ್ರಕಾರ ಹೆಣ್ಣಿನ ಮೂಲಕವೇ ಸ್ಥಿರಾಸ್ತಿಯ ಅನುಭವವೆಂದಿರುವಾಗ ಪ್ರತ್ಯೇಕವಾಗಿ ಈ ಒಕ್ಕಣೆಯೇಕೆ ಎನ್ನುವ ಪ್ರಶ್ನೆ ಏಳುತ್ತದೆ. ರಾಜತಂತ್ರದ ಇತಿಹಾಸದ ದೃಷ್ಟಿಯಲ್ಲಿ ಈ ಶಾಸನ ಪ್ರಾಮುಖ್ಯವಾಗಿದೆ.

                ಕುಂಬಳೆ ರಾಜ್ಯವು ಎಂದಿನಿಂದ ಅಸ್ತಿತ್ವಕ್ಕೆ ಬಂತೆಂಬುದು ಇಂದಿಗೂ ನಿಶ್ಚಯವಾಗಿಲ್ಲ. ಹೇಗೂ ಕ್ರಿ.ಶ. ಹತ್ತನೇ ಶತಮಾನಕ್ಕೆ ಈ ರಾಜ್ಯವು ಸ್ವತಂತ್ರವಾಗಿ ಆಳುತ್ತಿದ್ದಿತೆಂದೂ ಈ ಕಾಲದ ಈ ರಾಜ್ಯದ ಒಬ್ಬ ಅರಸನು ಜಯಸಿಂಹನೆಂದೂ ಈ ಶಾಸನವು ಇತ್ಯರ್ಥಪಡಿಸುತ್ತದೆ. ಹನ್ನೊಂದನೇ ಶತಕದಲ್ಲಿ ಇನ್ನೊಬ್ಬ ಜಯಸಿಂಹನೂ, ಹದಿನಾಲ್ಕನೆಯ ಶತಕದಲ್ಲಿ ಮತ್ತೊಬ್ಬ ಜಯಸಿಂಹನೂ ಕುಂಬಳೆ ಮನೆತನದಲ್ಲಿದ್ದರೆಂದು ಆಧಾರಗಳಿಂದ ತಿಳಿದುಬರುತ್ತದೆ. 

                 ಈ ಸಂದರ್ಭದಲ್ಲಿ ಇನ್ನೊಂದು ವಿಷಯವನ್ನು ಸ್ಪಷ್ಟೀಕರಿಸಬೇಕಾಗಿದೆ. ಹೆಚ್ಚು ಕಡಿಮೆ ಹತ್ತನೇ ಶತಮಾನಕ್ಕೆ ಕುಂಬಳೆ ಪ್ರಾಂತದಲ್ಲಿ ಕನ್ನಡ ಭಾμÉಯು ಬಳಕೆಯಲ್ಲಿತ್ತೆಂಬುದು ವಿದಿತ. ಸುಮಾರು ಹತ್ತನೇ ಶತಮಾನದಿಂದ ಈ ಪ್ರವೇಶವೆಲ್ಲ ಕನ್ನಡದ ವಿಭಾಗವಾಗಿದ್ದಿರಬೇಕೆಂದು ಇದರಿಂದ ವಿಶದವಾಗುತ್ತದೆ. ಈ ಕುಂಬಳೆ ಮನೆತನದ ಅರಸರು 'ಶ್ರೀಮತ್ ಬನವಸೆ ಪುರವರಾಧೀಶ್ವರ ಸೂರ್ಯಕುಲ ತಿಲಕ ಸಾಹಸದ ಸಂಜಯ ಸತ್ಯ ರತ್ನಾಕರ ಸರಸ್ವತೀ ಕರ್ಣಕುಂಡಲಾಭರಣ ಶ್ರೀಮದನೇಶ್ವರ ಪಾದಪದ್ಮಾರಾಧಕ ಶ್ರೀ ವೀರಪ್ರತಾಪ ಕುಂಬಳೆ ಧರ್ಮಸಿಂಹಾಸನದ’ ಎಂಬೀ ಬಿರುದಾಂಕಿತರಾಗಿದ್ದರೆಂದು ತಿಳಿಯುವುದರಿಂದ ಈ ಪ್ರದೇಶವೆಲ್ಲ ಕರ್ನಾಟಕದ ಭಾಗವೇ ಆಗಿತ್ತೆಂದು ಇತಿಹಾಸವು ಸಮ್ಮಿತಿಸುತ್ತದೆ.

             ಮೇಲಾರ(ಐಲ ದೇವಸ್ಥಾನ)ದ ಮಹಾತ್ಮ್ಯವು ಮೇಲಿನ ಜಯಸಿಂಹನ ವಿಷಯದಲ್ಲಿ ಹೆಚ್ಚಿನ ಬೆಳಕನ್ನು ಬೀರುತ್ತದೆ. ಜಯಸಿಂಹನು ಪಾಂಡ್ಯ ರಾಜನನ್ನು ಯುದ್ದದಲ್ಲಿ ಜಯಿಸಿ ನೆಟ್ಟ ಒಂದು ಗೆಲ್ಗಂಬವು ಮಧೂರಲ್ಲಿದೆ. ಮುಗರ ಬಡಜರ ಆಳ್ವಿಕೆಯ ಕತೆಗಳು ಜನಜನಿತವಾಗಿವೆ. ಪಟ್ಟದ ಮೊಗರು, ಬಡಾಜೆ, ಅಂದಿನ ಕೆಲವು ತಂತ್ರಿ ಮನೆತನಗಳು ಇಂದಿಗೂ ಇವೆ. ಆದರೆ ಮಹಾತ್ಮ್ಯದಲ್ಲಿ ಕೊಟ್ಟ ಕಲಿಸಂಖ್ಯೆಯು ಕಾಲವನ್ನು ಮಾತ್ರ ಬಹಳ ಹಿಂದಕ್ಕೆ ಒಯ್ಯುತ್ತದೆ.

                        (ನಾಳೆಗೆ ಮುಂದುವರಿಯಲಿದೆ.)



Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries