HEALTH TIPS

ಆನ್‌ಲೈನ್ ವಂಚನೆ: 1000 ಸ್ಕೈಪ್‌ ಖಾತೆಗಳನ್ನು ನಿಷ್ಕ್ರಿಯಗೊಳಿಸಿದ ಗೃಹ ಇಲಾಖೆ

           ವದೆಹಲಿ: ಆನ್‌ಲೈನ್ ವಂಚನೆಗೆ ಗಡಿಯಾಚೆ ಕೂತು ಬಳಸುತ್ತಿದ್ದ ಒಂದು ಸಾವಿರ ಸ್ಕೈಪ್‌ ಐಡಿಗಳನ್ನು ಸರ್ಕಾರ ನಿಷ್ಕ್ರಿಯಗೊಳಿಸಿದೆ.

          ಆನ್‌ಲೈನ್‌ ವಂಚನೆ, ಬೆದರಿಕೆ, ಡಿಜಿಟಲ್ ಅರೆಸ್ಟ್‌ನಂತ ಕೃತ್ಯಗಳಿಗೆ ಇವುಗಳನ್ನು ಬಳಸಲಾಗುತ್ತಿತ್ತು.

             ಈ ಕುರಿತಂತೆ ಗ್ರಾಹಕರಿಗೆ ಎಚ್ಚರಿಕೆ ಸಂದೇಶ ಕಳುಹಿಸಿರುವ ಸೈಬರ್ ಕ್ರೈಂ ಸಮನ್ವಯ ಕೇಂದ್ರ, 'ಸೈಬರ್ ಅಪರಾಧಗಳನ್ನು ನಿಯಂತ್ರಿಸಲು ಕೇಂದ್ರ ಗೃಹ ಇಲಾಖೆ ಸಹಯೋಗದಲ್ಲಿ ತಂಡವನ್ನು ರಚಿಸಲಾಗಿದೆ.

               ಜಾರಿ ನಿರ್ದೇಶನಾಲಯ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳ ಅಧಿಕಾರಿಗಳ ಸೋಗು ಹಾಕಿಕೊಂಡು ಬೆದರಿಕೆ ಒಡ್ಡುತ್ತಿರುವ ಹಾಗೂ ವಂಚಿಸುತ್ತಿರುವ ಕುರಿತು ಸಾಕಷ್ಟು ದೂರುಗಳು ಸಲ್ಲಿಕೆಯಾಗಿವೆ. ಇಂಥ ವಂಚನೆಗೆ ಬಹಳಷ್ಟು ಜನರು ಸಾಕಷ್ಟು ಹಣ ಕಳೆದುಕೊಂಡಿದ್ದಾರೆ. ಈ ಕರೆಗಳು ಬಂದ ಸಂದರ್ಭದಲ್ಲಿ 1930ಗೆ ಕರೆ ಮಾಡಿ ಅಥವಾ www.cybercrime.gov.in ಇಮೇಲ್ ಕಳುಹಿಸಿ' ಎಂದಿದೆ.

            'ಗಡಿಯಾಚೆ ಇರುವ ವಂಚಕರು ಇಂಥ ಜಾಲವನ್ನು ಹೆಣೆಯುತ್ತಿದ್ದಾರೆ. ಇದೊಂದು ಸಂಘಟಿತ ಆನ್‌ಲೈನ್ ಆರ್ಥಿಕ ಅಪರಾಧವಾಗಿದೆ. ಇದನ್ನು ಪಾರ್ಸಲ್ ಸ್ಕ್ಯಾಮ್‌ ಎಂದೂ ಕರೆಯಲಾಗುತ್ತದೆ. ಇದರಲ್ಲಿ ಗ್ರಾಹಕರೊಬ್ಬರಿಗೆ ಪಾರ್ಸಲ್ ಕಳುಹಿಸಲಾಗುತ್ತದೆ. ಅದರಲ್ಲಿ ಮಾದಕ ದ್ರವ್ಯ, ನಕಲಿ ನೋಟುಗಳು, ನಕಲಿ ಪಾಸ್‌ಪೋರ್ಟ್‌ನಂತ ವಸ್ತುಗಳು ಇರುತ್ತವೆ. ಇದನ್ನು ಸ್ವೀಕರಿಸಿದ ಬೆನ್ನಲ್ಲೇ, ಅಧಿಕಾರಿಗಳ ಸೋಗಿನಲ್ಲಿ ಕೆಲವರು ಕರೆ ಮಾಡಿ ಬೆದರಿಸಿ ಹಣದ ಬೇಡಿಕೆ ಇಡುತ್ತಾರೆ' ಎಂದಿದೆ.

'ಮತ್ತೊಂದು ಇಂಥದ್ದೇ ಪ್ರಕರಣದಲ್ಲಿ, ವ್ಯಕ್ತಿಯೊಬ್ಬರ ಸಂಬಂಧಿಕರೊಬ್ಬರು ಕೆಲ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಪೊಲೀಸ್ ವಶದಲ್ಲಿದ್ದಾರೆ ಎಂದೋ ಅಥವಾ ಅಪಘಾತಕ್ಕೀಡಾಗಿದ್ದಾರೆ ಎಂದೋ ಕರೆ ಮಾಡಿ ವಂಚಿಸುವ ದೊಡ್ಡ ಜಾಲವೇ ಇದೆ' ಎಂದು ತಿಳಿಸಲಾಗಿದೆ.

'ಡಿಜಿಟಲ್‌ ಅರೆಸ್ಟ್‌ ಆಗಿದ್ದೀರಿ ಎಂದು ಸ್ಕೈಪ್ ಅಥವಾ ಇತರ ವಿಡಿಯೊ ಕಾನ್ಫರೆನ್ಸ್ ಮೂಲಕ, ತಮ್ಮ ಬೇಡಿಕೆ ಈಡೇರುವವರೆಗೂ ವಿಚಾರಣೆ ನಡೆಸುವ ನಾಟಕವಾಡುತ್ತಾರೆ. ಇದಕ್ಕಾಗಿ ವಂಚಕರು ಪೊಲೀಸ್ ಠಾಣೆ ಮಾದರಿಯ ಸ್ಟುಡಿಯೊವನ್ನೇ ಸಿದ್ಧಪಡಿಸಿರುತ್ತಾರೆ. ಅಲ್ಲಿರುವ ವಂಚಕರೂ ಪೊಲೀಸ್ ಸಮವಸ್ತ್ರ ಧರಿಸಿ, ನೈಜ ಪೊಲೀಸರಂತೆಯೇ ವರ್ತಿಸುತ್ತಿರುತ್ತಾರೆ' ಎಂದು ಸೈಬರ್ ಕ್ರೈಂ ಸಮನ್ವಯ ಕೇಂದ್ರ ಹೇಳಿದೆ.

             ಇಂಥ ವಂಚನೆಯನ್ನು ನಿಯಂತ್ರಿಸಲು ಕೇಂದ್ರ ಗೃಹ ಸಚಿವಾಲಯವು ಇತರ ಇಲಾಖೆ ಹಾಗೂ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದೆ. ಮೈಕ್ರೊಸಾಫ್ಟ್ ಜತೆಗೂಡಿ ಒಂದು ಸಾವಿರ ಸ್ಕೈಪ್ ಖಾತೆಗಳನ್ನು ರದ್ದುಪಡಿಸಲಾಗಿದೆ. ಇಂಥ ಕೃತ್ಯಗಳಿಗೆ ಬಳಕೆಯಾದ ಸಿಮ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ' ಎಂದು ಪ್ರಕಟಣೆಯಲ್ಲಿ ತಿಳಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries