HEALTH TIPS

ಬಿ.ಇ.ಎಂ. ಹೈಸ್ಕೂಲ್ 100 ಶೇ. ಫಲಿತಾಂಶ

           ಕಾಸರಗೋಡು: ಮಾರ್ಚ್ ತಿಂಗಳಲ್ಲಿ ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಕಾಸರಗೋಡಿನ ಬಿ.ಇ.ಎಂ. ಹೈಸ್ಕೂಲ್‍ನ 252 ಮಕ್ಕಳು ಹಾಜರಾಗಿದ್ದು ಎಲ್ಲಾ ಮಕ್ಕಳು ಉತ್ತೀರ್ಣರಾಗಿ ಶೇ.100 ಫಲಿತಾಂಶ ದಾಖಲಾಗಿದೆ. 42 ಮಕ್ಕಳು ಎಲ್ಲಾ ವಿಷಯದಲ್ಲಿ ಎ ಪ್ಲಸ್ ಪಡೆಯುವುದರ ಮೂಲಕ ಶಾಲೆಯ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಅತಿ ಹೆಚ್ಚು ಸಂಖ್ಯೆಯಲ್ಲಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್, ಶೇ.100 ಫಲಿತಾಂಶ ಪಡೆಯುವಂತೆ ಮಕ್ಕಳನ್ನು ತಯಾರಿ ಗೊಳಿಸುವಲ್ಲಿ  ಪ್ರಾಂಶುಪಾಲರಾದ ರಾಜೇಶ್ಚಂದ್ರ ಕೆ.ಪಿ, ಮುಖ್ಯೋಪಾಧ್ಯಾಯರಾದ ವಿನೀತ್ ವಿನ್‍ಸ್ಟನ್,  ಪಿಟಿಎ ಹಾಗೂ ಮೆನೇಜ್‍ಮೆಂಟ್‍ನ ನಿರಂತರ ಪ್ರೋತ್ಸಾಹ ಮತ್ತು ಅಧ್ಯಾಪಕರ ಕಠಿನ ಪರಿಶ್ರಮ ಮಹತ್ತರ ಪಾತ್ರವಹಿಸಿದೆ. ಈ ಸಂತಸದ ಸಂದರ್ಭದಲ್ಲಿ ಶಾಲಾ ಪಿಟಿಎ ಹಳೆ ವಿದ್ಯಾರ್ಥಿ ಸಂಘ ಮತ್ತು ಕಾಸರಗೋಡಿನ ಶಿಕ್ಷಣ ಪ್ರೇಮಿಗಳು, ಮಕ್ಕಳನ್ನು, ಮಕ್ಕಳ ಪೋಷಕರನ್ನು ಮತ್ತು ಶಾಲಾ ಶಿಕ್ಷಕರನ್ನು ಈ ವಿಶೇಷ ಸಾಧನೆಗೆ ಅಭಿನಂದಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries