ತಿರುವನಂತಪುರ: ಸಾಕು ಪ್ರಾಣಿಗಳ ಮಾರಾಟ ಮಳಿಗೆಯೊಂದರಲ್ಲಿ (ಪೆಟ್ ಶಾಪ್) ಸಂಭವಿಸಿದ ಅಗ್ನಿಅವಘಡದಲ್ಲಿ ಸುಮಾರು 100 ಪಕ್ಷಿಗಳು, ಮೊಲಗಳು ಹಾಗೂ ಮೀನುಗಳು ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.
ತಿರುವನಂತಪುರ: ಸಾಕು ಪ್ರಾಣಿಗಳ ಮಾರಾಟ ಮಳಿಗೆಯೊಂದರಲ್ಲಿ (ಪೆಟ್ ಶಾಪ್) ಸಂಭವಿಸಿದ ಅಗ್ನಿಅವಘಡದಲ್ಲಿ ಸುಮಾರು 100 ಪಕ್ಷಿಗಳು, ಮೊಲಗಳು ಹಾಗೂ ಮೀನುಗಳು ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.
ಶಿಬಿನ್ ಎಂಬುವವರಿಗೆ ಸೇರಿದ ಮಳಿಗೆಯಲ್ಲಿ ಮುಂಜಾನೆ ಬೆಂಕಿ ಹೊತ್ತಿಕೊಂಡಿತ್ತು.
ಅತಿಯಾದ ಹೊಗೆಯಿಂದ ಅಂಗಡಿ ಪಕ್ಕದ ನಿವಾಸಿಗಳ ಉಸಿರಾಟಕ್ಕೆ ತೊಂದರೆಯಾಗಿತ್ತು. ಅವರು ಕೂಡಲೇ ಅಗ್ನಿಶಾಮಕ ದಳ ಮತ್ತು ಪೆಟ್ ಶಾಪ್ ಮಾಲೀಕರಿಗೆ ಮಾಹಿತಿ ನೀಡಿದರು.
100 ಪಕ್ಷಿಗಳು, ಕೆಲ ಮೀನು ಮತ್ತು ಮೊಲಗಳು ಸಾವಿಗೀಡಾಗಿದ್ದು, ಶಾಪ್‌ನಲ್ಲಿದ್ದ ಅನೇಕ ಪರಿಕರಗಳು ನಾಶವಾಗಿವೆ. ₹2.5 ಲಕ್ಷಕ್ಕೂ ಅಧಿಕ ನಷ್ಟವುಂಟಾಗಿದೆ ಎಂದು ಶಿಬಿನ್ ತಿಳಿಸಿದ್ದಾರೆ.
ಘಟನೆಯ ಹಿಂದೆ ಕೆಲವರ ಕೈವಾಡ ಇರುವ ಶಂಕೆ ವ್ಯಕ್ತವಾಗಿದ್ದು, ಶಿಬಿನ್ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.