ಅಮೆರಿಕದ ನಾರ್ತ್ ಕೆರೊಲಿನಾದ ಚಾರ್ಲೊಟ್‍ನಲ್ಲಿ ಸುಮಾರು 100 ಮಲಯಾಳಿ ಮಹಿಳೆಯರು ಸಾರ್ವಜನಿಕವಾಗಿ ನಡೆಸಿದ ತಿರುವಾದಿರ ನೃತ್ಯ ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಏಪ್ರಿಲ್ 6ರಂದು ಈ ತಿರುವಾದಿರ ತೆರೆ ಕಂಡಿದ್ದರೂ ಹೊಸ ಅನುಭವ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಇನ್ನೂ ಚರ್ಚೆಯಾಗುತ್ತಿದೆ.
ಮಲಯಾಳಿ ಮಹಿಳೆಯರು ನೇರಳೆ ಬಣ್ಣದ ಕುಪ್ಪಸ ಮತ್ತು ಕೆನೆ ಸೀರೆಯನ್ನು ಧರಿಸಿ ತಿರುವಾದಿರ ನೃತ್ಯ ಪ್ರದರ್ಶಿಸಿದ್ದರು. ಇದನ್ನು ತೆರೆದ ಮೈದಾನದಲ್ಲಿ ಎಂಟು ನಿಮಿಷಗಳ ಕಾಲ ಆಡಲಾಯಿತು. ಕಳೆದ 26 ವರ್ಷಗಳಿಂದ ಅಮೇರಿಕಾದಲ್ಲಿ ನೆಲೆಸಿರುವ ಕೊಡುಂಗಲ್ಲೂರು ಮೂಲದ ರಶ್ಮಿ ಮುಳಕಲ್ ಅವರಿಗೆ ಇದೊಂದು ಮರೆಯಲಾಗದ ಜೀವನದ ಅನುಭವ. ಕೇರಳದ ವಿಶಿಷ್ಟ ಸಂಸ್ಕøತಿಯ ಬಾವುಟವನ್ನು ವಿದೇಶಿ ನೆಲಕ್ಕೆ ಕಸಿ ಮಾಡಲು ಸಾಧ್ಯವಾಗುತ್ತಿರುವುದಕ್ಕೆ ರಶ್ಮಿ ಖುಷಿ ವ್ಯಕ್ತಪಡಿಸಿದ್ದರು.
ಕಳೆದ 10 ವರ್ಷಗಳಿಂದ ಚಾರ್ಲೋಟ್‍ನಲ್ಲಿ ಪ್ರತಿ ತಿರುವೋಣಕ್ಕೆ ತಿರುವಾದಿರ ನೃತ್ಯ ಪ್ರದರ್ಶನಗೊಳ್ಳುತ್ತಿದೆ. ಸಾಮಾನ್ಯವಾಗಿ 30 ಮಹಿಳೆಯರು ಮಾತ್ರ ಇದರಲ್ಲಿ ಭಾಗವಹಿಸುತ್ತಾರೆ. ಅದಕ್ಕಾಗಿಯೇ ಕಳೆದ ವಿಷು ಸಂಕ್ರಾಂತಿಯ ದಿನ ಅದನ್ನು ವಿಸ್ತರಿಸಿ 100 ಮಹಿಳೆಯರನ್ನು ಒಳಗೊಂಡ ತಿರುವಾದಿರ ಉತ್ಸವವಾಗಿ ಬದಲಾಯಿಸಲಾಯಿತು. ಇದು ಯಶಸ್ವಿಯಾಯಿತು.
ಕೇರಳದಲ್ಲಿ ಸಾವಿರಾರು ಮಹಿಳೆಯರನ್ನು ಒಳಗೊಂಡ ಮೆಗಾ ತಿರುವಾದಿರ ಸಾಮಾನ್ಯವಾಗಿದ್ದರೂ, ಯುನೈಟೆಡ್ ಸ್ಟೇಟ್ಸ್‍ನಂತಹ ವಿದೇಶದಲ್ಲಿ 100 ಮಂದಿ ಮಲಯಾಳಿ ಮಹಿಳೆಯರು ಸಮಾರಂಭದಲ್ಲಿ ಭಾಗವಹಿಸಿದ್ದು ಒಂದು ಸಾಧನೆ ಎಂದು ಭಾಗವಹಿಸಿದವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.