ಕಾಸರಗೋಡು: ಮನೆಯಲ್ಲಿ ಮಲಗಿದ್ದ 10 ವರ್ಷದ ಬಾಲಕಿಯನ್ನು ಅಪಹರಿಸಿ ಚಿನ್ನಾಭರಣ ದೋಚಿ, ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ವೈದ್ಯಕೀಯ ವರದಿ ತಿಳಿಸಿದೆ.
ಕುತ್ತಿಗೆ ಮತ್ತು ಕಣ್ಣಿಗೆ ಗಾಯವಾಗಿರುವ ಮಗು ದೈಹಿಕ ತೊಂದರೆಯಿಂದ ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.
ಇಬ್ಬರು ಅನುಮಾಸ್ಪದರು ಪೋಲೀಸರ ವಶದಲ್ಲಿದ್ದಾರೆ ಎಂದು ವರದಿಯಾಗಿದೆ. ಇದನ್ನು ಪೆÇಲೀಸ್ ಅಧಿಕಾರಿಗಳು ಇನ್ನೂ ಖಚಿತಪಡಿಸಿಲ್ಲ. ಕಿರುಕುಳ ನೀಡಿದ ವ್ಯಕ್ತಿ ಮಲಯಾಳಿ. ನಡೆದ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿಯೂ ಹೇಳಿ ಕಿರುಕುಳ ನೀಡಿ ಮನೆಗೆ ತೆರಳುವಂತೆ ಹೇಳಿರುವುದಾಗಿ ಬಾಲಕಿ ಪೆÇಲೀಸರಿಗೆ ಹೇಳಿಕೆ ನೀಡಿದ್ದಾಳೆ.
ಪಟನ್ನಕ್ಕಾಡ್‍ನ ಖಾಲಿ ಜಾಗದಲ್ಲಿ ಬುಧವಾರ ಬೆಳಗಿನ ಜಾವ ಮೂರು ಗಂಟೆಗೆ ಈ ಘಟನೆ ನಡೆದಿದೆ. ಅಜ್ಜ ಹಸುವಿಗೆ ಹಾಲು ಕೊಡಲು ಹೋದಾಗ ಈ ಘಟನೆ ನಡೆದಿದೆ. ಮನೆಗೆ ನುಗ್ಗಿದ ದುಷ್ಕರ್ಮಿ ಮಲಗಿದ್ದ ಬಾಲಕಿಯನ್ನು ಹಿಡಿದು ಸ್ಥಳದಿಂದ ತೆರಳಿದ್ದಾನೆ. ಬಳಿಕ ಕಿವಿಯ ಆಭರಣಗಳನ್ನು ಕದ್ದು ಬಾಲಕಿಯನ್ನು ಮನೆಯಿಂದ 500 ಮೀಟರ್ ದೂರದಲ್ಲಿ ಬಿಟ್ಟು ಹೋಗಿದ್ದ.