ಅಹಮದಾಬಾದ್ : ಲೋಕಸಭಾ ಚುನಾವಣೆಯ ಮುನ್ನಾದಿನದಂದು(ಸೋಮವಾರ) ಅಹಮದಾಬಾದ್‌ನ 10 ಶಾಲೆಗಳಿಗೆ ಬಾಂಬ್ ಸ್ಫೋಟದ ಬೆದರಿಕೆಯ ಇಮೇಲ್ ಬಂದಿತ್ತು. ಆದರೆ ಇದು ಹುಸಿ ಬೆದರಿಕೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಹಮದಾಬಾದ್‌ನ 10 ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಇಮೇಲ್
0
ಮೇ 06, 2024
Tags
ಅಹಮದಾಬಾದ್ : ಲೋಕಸಭಾ ಚುನಾವಣೆಯ ಮುನ್ನಾದಿನದಂದು(ಸೋಮವಾರ) ಅಹಮದಾಬಾದ್‌ನ 10 ಶಾಲೆಗಳಿಗೆ ಬಾಂಬ್ ಸ್ಫೋಟದ ಬೆದರಿಕೆಯ ಇಮೇಲ್ ಬಂದಿತ್ತು. ಆದರೆ ಇದು ಹುಸಿ ಬೆದರಿಕೆ ಎಂದು ಪೊಲೀಸರು ತಿಳಿಸಿದ್ದಾರೆ.
'ಬೆದರಿಕೆ ಬಳಿಕ ಪೊಲೀಸರು ಹಾಗೂ ಬಾಂಬ್ ಪತ್ತೆ ಮತ್ತು ವಿಲೇವಾರಿ ದಳ, ಶ್ವಾನ ದಳ ಮತ್ತು ಕ್ರೈಂ ಬ್ರಾಂಚ್ ತಂಡಗಳು ಈ ಶಾಲೆಗಳಿಗೆ ತೆರಳಿ ಸಂಪೂರ್ಣ ಶೋಧ ನಡೆಸಿವೆ.
'ಶೋಧ ಕಾರ್ಯಾಚರಣೆಯಲ್ಲಿ ಯಾವುದೇ ಸ್ಫೋಟಕಗಳು ಕಂಡುಬಂದಿಲ್ಲ. ನಮ್ಮ ತಂಡಗಳು ಈ ಪ್ರದೇಶಗಳಲ್ಲಿ ಗಸ್ತು ತಿರುಗುತ್ತಿವೆ. ಇಮೇಲ್ ಕಳುಹಿಸುವವರ ಬಗ್ಗೆ ತಾಂತ್ರಿಕ ಕಣ್ಗಾವಲು ಆರಂಭಿಸಲಾಗಿದೆ. ಯಾರೂ ಭಯಪಡಬೇಡಿ. ವದಂತಿಗಳಿಂದ ದೂರವಿರಿ. ಯಾವುದೇ ಭಯವಿಲ್ಲದೆ ನಾಳೆ ನಿಮ್ಮ ಮತದಾನದ ಹಕ್ಕನ್ನು ಚಲಾಯಿಸಿ' ಎಂದು ಜನರಲ್ಲಿ ಮನವಿ ಮಾಡಿದೆ.
ನಮ್ಮ ಪ್ರಾಥಮಿಕ ತನಿಖೆಯ ಪ್ರಕಾರ, ಇಮೇಲ್‌ನ ಡೊಮೇನ್ ಭಾರತದಿಂದ ಹೊರಗಿದೆ ಎಂದು ಪೊಲೀಸ್ ಉಪ ಕಮಿಷನರ್ ಲವಿನಾ ಸಿನ್ಹಾ ಪಿಟಿಐಗೆ ತಿಳಿಸಿದ್ದಾರೆ. ಕಾರ್ಯಾಚರಣೆ ವೇಳೆ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ. ಮೇ 7ರಂದು ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಶಾಂತಿ ಕದಡುವ ಉದ್ದೇಶದಿಂದ ಬೆದರಿಕೆ ಹಾಕಲಾಗಿದೆ ಎಂದಿದ್ದಾರೆ.
ಗುಜರಾತ್‌ನ 25 ಲೋಕಸಭಾ ಕ್ಷೇತ್ರಗಳಿಗೆ ಮಂಗಳವಾರ(ಮೇ 7) ಮತದಾನ ನಡೆಯಲಿದೆ.