ಕಾಸರಗೋಡು : ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ವಿವಿಧ ಸ್ನಾತಕೋತ್ತರ ಕೋರ್ಸ್‍ಗಳಿಗೆ ಪ್ರವೇಶಕ್ಕಾಗಿ ನೋಂದಣಿ ಆರಂಭಗೊಮಡಿದ್ದು, ವಿಶ್ವವಿದ್ಯಾನಿಲಯದ ವೆಬ್‍ಸೈಟ್ www.cukerala.ac.in ಗೆ ಭೇಟಿ ನೀಡುವ ಮೂಲಕ ಮೇ 10 ರವರೆಗೆ ನೋಂದಾಯಿಸಿಕೊಳ್ಳಬಹುದಾಗಿದೆ.
ಮೇ 15 ರಂದು ರ್ಯಾಂಕ್ ಪಟ್ಟಿಯನ್ನು ಪ್ರಕಟಿಸಲಾಗುವುದು. ದೇಶದ ವಿವಿಧ ವಿಶ್ವವಿದ್ಯಾನಿಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‍ಟಿಎ) ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಯುಇಟಿಪಿಜಿ)ಯಲ್ಲಿ ಭಾಗವಹಿಸಿದವರು ನೋಂದಾಯಿಸಿಕೊಳ್ಳಬಹುದಗಿದೆ. ವಿಶ್ವವಿದ್ಯಾನಿಲಯವು 26 ಸ್ನಾತಕೋತ್ತರ ಕಾರ್ಯಕ್ರಮಗಳನ್ನು ಹೊಂದಿದೆ. ಎಂಎ ಅರ್ಥಶಾಸ್ತ್ರ, ಎಂ.ಎ. ಇಂಗ್ಲಿಷ್ ಮತ್ತು ತುಲನಾತ್ಮಕ ಸಾಹಿತ್ಯ, ಎಂ.ಎ. ಭಾಷಾಶಾಸ್ತ್ರ ಮತ್ತು ಭಾಷಾ ತಂತ್ರಜ್ಞಾನ, ಎಂ.ಎ. ಹಿಂದಿ ಮತ್ತು ತುಲನಾತ್ಮಕ ಸಾಹಿತ್ಯ, ಎಂ.ಎ. ಅಂತರಾಷ್ಟ್ರೀಯ ಸಂಬಂಧಗಳು ಮತ್ತು ರಾಜಕೀಯ ವಿಜ್ಞಾನ, ಎಂಎ ಮಲಯಾಳಂ, ಎಂಎ ಕನ್ನಡ, ಎಂ.ಎ. ಸಾರ್ವಜನಿಕ ಆಡಳಿತ ಮತ್ತು ನೀತಿ ಅಧ್ಯಯನಗಳು, ಎಂಎಸ್‍ಡಬ್ಲ್ಯೂ, ಎಂಎಸ್ಸಿ ಪ್ರಾಣಿಶಾಸ್ತ್ರ, ಎಂಎಸ್ಸಿ ಬಯೋಕೆಮಿಸ್ಟ್ರಿ, ಎಂಎಸ್ಸಿ ರಸಾಯನಶಾಸ್ತ್ರ, ಎಂಎಸ್ಸಿ ಕಂಪ್ಯೂಟರ್ ಸೈನ್ಸ್, ಎಂಎಸ್ಸಿ ಪರಿಸರ ವಿಜ್ಞಾನ, ಎಂಎಸ್ಸೆಇ ಜೀನೋಮಿಕ್ ಸೈನ್ಸ್, ಎಂಎಸ್ಸಿ ಭೂವಿಜ್ಞಾನ, ಎಂಎಸ್ಸಿ ಗಣಿತ, ಎಂಎಸ್ಸಿ ಸಸ್ಯಶಾಸ್ತ್ರ,ಕಾರ್ಯಕ್ರಮಗಳೆಂದರೆಎಂಎಸ್ಸೆ ರಸಾಯನಶಾಸ್ತ್ರ, ಎಂಎಸ್ಸೆಇ ಯೋಗಾ ಥೆರಪಿ, ಎಂಎಲ್‍ಎಂ, ಮಾಸ್ಟರ್ ಆಫ್ ಪಬ್ಲಿಕ್ ಹೆಲ್ತ್, ಎಂಬಿಎ, ಜನರಲ್ ಮ್ಯಾನೇಜ್‍ಮೆಂಟ್, ಎಂಬಿಎ-ಪ್ರವಾಸೋದ್ಯಮ ಮತ್ತು ಪ್ರಯಾಣ ನಿರ್ವಹಣೆ ಮತ್ತು ಎಂಕಾಮ್ ವಿಭಾಗಗಳಿರುವುದು. ಹೆಚ್ಚಿನ ಮಾಹಿತಿಗಾಗಿ www.cukerala.ac.in ಗೆ ಭೇಟಿ ನೀಡಿ. ಇಮೇಲ್: ಚಿಜmissioಟಿs@ಛಿuಞeಡಿಚಿಟಚಿ.ಚಿಛಿ.iಟಿ