ಬದಿಯಡ್ಕ: ಗೌಡ ಸಾರಸ್ವತ ಬ್ರಾಹ್ಮಣ (ಜಿ.ಎಸ್.ಬಿ.) ಸಮಾಜದ ಬದಿಯಡ್ಕ ಶ್ರೀರಾಮ ಭಜನಾ ಮಂದಿರದ 10ನೇ ವರ್ಷದ ಪ್ರತಿಷ್ಠಾ ವರ್ಧಂತಿ, ಶ್ರೀರಾಮ ನಾಮ ತಾರಕ ಮಂತ್ರ ಹೋಮ ಸೋಮವಾರ ಜರಗಿತು. ಬೆಳಗ್ಗೆ ಗಣಪತಿ ಹೋಮ, ಶ್ರೀರಾಮದೇವರ ಸಾನ್ನಿಧ್ಯ ಕಲಶ ಅಭಿಷೇಕ, ವಿವಿಧ ಭಜನಾತಂಡಗಳಿಂದ ಭಜನೆ ನಡೆಯಿತು. ಬೆಳಗ್ಗೆ ಯಜ್ಞಮಂಟಪದಲ್ಲಿ ಪ್ರಾರ್ಥನೆ, ಸಂಕಲ್ಪ, ಪುಣ್ಯಾಹ, ಅಭ್ಯುದಾಯಕ ಕಲಶಾವಾಧಿಸ, ಮಂಡಲಾವಾಸ, ದೇವತಾ ಆವಾಹನೆ, ಪೂಜೆ ನಡೆಯಿತು. ನಂತರ ಆರಂಭವಾದ ಶ್ರೀರಾಮ ನಾಮ ತಾರಕ ಮಂತ್ರ ಹೋಮ ಮಧ್ಯಾಹ್ನ ಪೂರ್ಣಾಹುತಿ ನಡೆಯಿತು.
ಬೆಳಗ್ಗೆ ಪಾಂಡುರಂಗ ಶೆಣೈ ಸಭಾಮಂಟಪದಲ್ಲಿ ಭಜನಾ ಸಂಕೀರ್ತನೆ ನಡೆಯಿತು. ಲಕ್ಷ್ಮೀ ಜಿ.ಪೈ, ಕು. ಉನ್ನತಿ ಪೈ, ಶ್ರೀರಾಮ ಭಜನಾ ಮಂಡಳಿ ಬದಿಯಡ್ಕ, ಜಿ.ಎಸ್.ಬಿ.ಮಹಿಳಾ ಭಜನಾಮಂಡಳಿ ಮುಳ್ಳೇರಿಯ, ಶ್ರೀ ವೀರ ವಿಠಲ ಮಹಿಳಾ ಭಜನಾ ಮಂಡಳಿ ಕುಂಬಳೆ, ಪೂಜಾ ಪ್ರಭು ಪುತ್ತೂರು, ಜಿ.ಎಸ್.ಬಿ.ಸಮಾಜ ಸದಸ್ಯರು ಬದಿಯಡ್ಕ, ಕು. ಅಪೇಕ್ಷಾ ಪೈ ಪುತ್ತೂರು, ಪಾಂಡುರಂಗ ನಾಯಕ್ ಮತ್ತು ಬಳಗ ಪುತ್ತೂರು ಇವರು ಭಜನಾ ಸೇವೆ ನಡೆಸಿಕೊಟ್ಟರು. ರಾತ್ರಿ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.