HEALTH TIPS

ಮೇ 11- 12: ಕುಳೂರು ಶಾಲಾ ಶತಾಬ್ದಿ ಸಂಭ್ರಮ :

                 ಮಂಜೇಶ್ವರ : ಶಿಕ್ಷಣ ಕ್ಷೇತ್ರದ ಸ್ಪರ್ಧಾತ್ಮಕ ಈ ಯುಗದಲ್ಲಿ ಸರಕಾರಿ ಶಾಲೆಗಳು ಎಲ್ಲಾ ವಿಧದ ಪೈಪೆÇೀಟಿಯನ್ನು ಎದುರಿಸುವ ಈ ಕಾಲಘಟ್ಟದಲ್ಲಿ ಎಲ್ಲವನ್ನೂ ಎದುರಿಸಿ ಸಮಾಜವನ್ನು ತನ್ನತ್ತ ಸೆಳೆದು ಮಾದರಿ ಶಾಲೆಯಾಗಿ ಗುರುತಿಸಿಕೊಂಡ ಶಾಲೆಗಳಲ್ಲಿ ಮಂಜೇಶ್ವರ ಉಪಜಿಲ್ಲೆಯ ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯೂ ಒಂದು. ಈ ವರ್ಷ ನೂರು ವರುಷಗಳನ್ನು ಪೂರೈಸಿ ಶತಮಾನೋತ್ಸವದ ಸಂಭ್ರಮದಲ್ಲಿರುವ ಕುಳೂರು ಶಾಲೆಯಲ್ಲಿ ಆ ಪ್ರಯುಕ್ತ 'ಶತಾಬ್ದಿ ಸಂಭ್ರಮ' ಕಾರ್ಯಕ್ರಮವು ನಾಳೆ (ಮೇ 11) ಹಾಗೂ ಭಾನುವಾರ ವಿವಿಧ ಕಾರ್ಯಕ್ರಮಗಳೊಂದಿಗೆ ಬಹು ವಿಜೃಂಭಣೆಯಿಂದ ನಡೆಯಲಿದೆ.

                   ಆ ಪ್ರಯುಕ್ತ ಮೇ 11 ರಂದು ಬೆಳಿಗ್ಗೆ 9:30 ಕ್ಕೆ ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಮೊಹಮ್ಮದ್ ಹಾಜಿ ಕಂಚಿಲರವರು ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ. ಆ ಬಳಿಕ ಕುಳೂರು ಕನ್ಯಾನ ಸದಾಶಿವ ಕೆ ಶೆಟ್ಟಿ ರವರು ತಮ್ಮ ಮಾತೃಶ್ರೀ ಲೀಲಾವತಿ ಪಕೀರ ಶೆಟ್ಟಿಯವರ ಸ್ಮರಣಾರ್ಥ ಶತಮಾನೋತ್ಸವ ಕಟ್ಟಡವಾದ ಸದಾಶಿವ ರಂಗಮಂದಿರ ಉದ್ಘಾಟನೆ ಹಾಗೂ ಕುಳೂರು ಕನ್ಯಾನ ರಘುರಾಮ ಕೆ ಶೆಟ್ಟಿ ಯವರು ಕೊಡುಗೆ ನೀಡಿದ ರೂಫ್ ಶೀಟ್ ಹಾಗೂ ಇಂಟರ್ಲಾಕ್ ವ್ಯವಸ್ಥೆಯನ್ನೊಳಗೊಂಡ ಸಭಾಂಗಣದ ಉದ್ಘಾಟನೆಯು ಜರಗಲಿದೆ.

                  ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಕುಳೂರು ಕನ್ಯಾನ ಸದಾಶಿವ ಕೆ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಕುಳೂರು ಬೀಡು ದಾಸಣ್ಣ ಆಳ್ವರವರು ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಇದೇ ಸಂದರ್ಭದಲ್ಲಿ ಶತಮಾನೋತ್ಸವ ಸವಿನೆನಪಿಗೆ ರಚನೆಯಾದ 'ಅರಳು' ಸ್ಮರಣ ಸಂಚಿಕೆಯನ್ನು ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿಯಾದ ದಿನೇಶ್ ವಿ ರವರು ಬಿಡುಗಡೆಗೊಳಿಸಲಿರುವರು. ಗಣ್ಯಾತಿಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತಲಿರುವರು.

            ಸಾಂಸ್ಕøತಿಕ ಕಾರ್ಯಕ್ರಮಗಳ ಅಂಗವಾಗಿ ಸಂಜೆ 5:00 ಗಂಟೆಯಿಂದ ಶಾಲಾ ರಕ್ಷಕ-ಶಿಕ್ಷಕ ಸಂಘದ ಸದಸ್ಯರು, ಹಳೆವಿದ್ಯಾರ್ಥಿಗಳು ಹಾಗೂ ಊರವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಶಾಲಾ ಮಕ್ಕಳಿಂದ ಕಿರುನಾಟಕ, ರಿದಂ ಫೆÇೀಕ್ ಬ್ಯಾಂಡ್ ಮಡಿಕೈ ಯವರಿಂದ ನಾಡಾನ್ ಪಾಟ್ ಹಾಗೂ ಶ್ರೀ ಸಿದ್ಧಿವಿನಾಯಕ ಯಕ್ಷಗಾನ ಮಂಡಳಿ ಕುಕ್ಕಾಜೆ ಇವರಿಂದ 'ಶಶಿಪ್ರಭ ಪರಿಣಯ' ಮಹಿಳಾ ಯಕ್ಷಗಾನ ಪ್ರದರ್ಶನ ನಡೆಯಲಿದೆ.

               ಮರುದಿನ ಬೆಳಿಗ್ಗೆ ಹಳೆ ವಿದ್ಯಾರ್ಥಿಗಳು ಹಾಗೂ ಊರವರಿಗೆ ಕ್ರೀಡಾಕೂಟ ನಡೆಯಲಿದೆ. ಸಂಜೆ ಲವಾನಂದ ಎಲಿಯಾಣ ಮತ್ತು ಬಳಗದವರಿಂದ ಡಾ. ರಾಜ್ ಕುಮಾರ್ ಹಿಟ್ಸ್ ರಸಮಂಜರಿ, ಡ್ಯಾನ್ಸ್ ಏಂಡ್ ಕಾಮಿಡಿ μÉೂೀ, ರಂಗತರಂಗ ಕಲಾವಿದರು ಕಾಪು ಇವರಿಂದ 'ಒರಿಯೆ' ತುಳು ಸಾಂಸಾರಿಕ ಹಾಸ್ಯಮಯ ನಾಟಕ ಪ್ರದರ್ಶನ ನಡೆಯಲಿದೆ.

            ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಮೊಹಮ್ಮದ್ ಹಾಜಿ ಕಂಚಿಲರವರು ವಹಿಸಲಿದ್ದು ಸಭೆಯಲ್ಲಿ ಹಲವಾರು ಗಣ್ಯ ವ್ಯಕ್ತಿಗಳು ಉಪಸ್ಥಿತರಿರುವರು.

              ಜೊತೆಗೆ ಶಾಲಾ ಮಹಾಪೆÇೀಷಕರಿಗೆ ಹಾಗೂ ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡ ಮಹನೀಯರಿಗೆ ಸನ್ಮಾನ ಕಾರ್ಯಕ್ರಮ, ಲವಾನಂದ ಎಲಿಯಾಣರವರ ಚೊಚ್ಚಲ ಕೃತಿ 'ನಗೆಮಲ್ಲಿಗೆ' ಲಲಿತ ಪ್ರಬಂಧದ ಬಿಡುಗಡೆ ಕಾರ್ಯಕ್ರಮವೂ ನಡೆಯಲಿದೆ.

             ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಹೆಚ್ವಿನ ಸಂಖ್ಯೆಯಲ್ಲಿ ಭಾಗವಹಿಸಿ, ಸಮಾರಂಭವನ್ನು ಯಶಾವಿಗೊಳಿಸಲು ಸಂಘಟನಾ ಸಮಿತಿ ಕರೆ ನೀಡಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries