ಮುಂಬೈ: ಮಹಾರಾಷ್ಟ್ರದಲ್ಲಿ ಇನ್ಮುಂದೆ 11 ಹಾಗೂ 12 ನೇ ತರಗತಿಗಳಿಗೆ ಇಂಗ್ಲಿಷ್ ಭಾಷಾ ವಿಷಯ ಕಡ್ಡಾಯ ಇರುವುದಿಲ್ಲ ಎನ್ನಲಾಗಿದೆ.
ಮುಂಬೈ: ಮಹಾರಾಷ್ಟ್ರದಲ್ಲಿ ಇನ್ಮುಂದೆ 11 ಹಾಗೂ 12 ನೇ ತರಗತಿಗಳಿಗೆ ಇಂಗ್ಲಿಷ್ ಭಾಷಾ ವಿಷಯ ಕಡ್ಡಾಯ ಇರುವುದಿಲ್ಲ ಎನ್ನಲಾಗಿದೆ.
ಈ ಕುರಿತು 'ಮಹಾರಾಷ್ಟ್ರ ರಾಜ್ಯ ಶಿಕ್ಷಣ, ಸಂಶೋಧನೆ ಹಾಗೂ ತರಬೇತಿ ಮಂಡಳಿ' (SCERT) ಕರಡು ಸಿದ್ದಪಡಿಸಿದ್ದು ಆ ಪ್ರಕಾರ ಇಂಗ್ಲಿಷ್ ಅನ್ನು ಕಡ್ಡಾಯದಿಂದ ತೆಗೆದುಹಾಕಿ ವಿದೇಶಿ ಭಾಷಾ ವಿಭಾಗದಲ್ಲಿ ಆಯ್ಕೆಯ ವಿಷಯವಾಗಿ ಇಡಲಾಗಿದೆ.
ಈ ಮೊದಲು ಮಹಾರಾಷ್ಟ್ರದಲ್ಲಿ 11 ಹಾಗೂ 12 ನೇ ತರಗತಿಗಳಿಗೆ ಇಂಗ್ಲಿಷ್ ಭಾಷಾ ವಿಷಯ ಕಡ್ಡಾಯವಿತ್ತು. ಅದರ ಜೊತೆ ಬೇರೆ ಯಾವುದಾದರೊಂದು ಪ್ರಾದೇಶಿಕ ಭಾಷೆ ಅಥವಾ ವಿದೇಶಿ ಭಾಷೆ ತೆಗೆದುಕೊಳ್ಳಬಹುದಿತ್ತು. ಈಗ ಈ ನಿಯಮಕ್ಕೆ ಬದಲಾವಣೆ ತರಲಾಗುತ್ತಿದೆ.
ಮರಾಠಿಯೂ ಸೇರಿದಂತೆ ಭಾರತದ 17 ಪ್ರಾದೇಶಿಕ ಭಾಷೆಗಳಲ್ಲಿ ಯಾವುದಾದರೂ ಒಂದನ್ನು 'ಗ್ರೂಪ್ ಎ' ದಿಂದ ತೆಗೆದುಕೊಳ್ಳಬಹುದು. ಅದರ ಜೊತೆಗೆ ಇಂಗ್ಲಿಷ್ ಸೇರಿದಂತೆ 8 ವಿದೇಶಿ ಭಾಷೆಗಳಲ್ಲಿ ಒಂದನ್ನು 'ಗ್ರೂಪ್ ಬಿ'ದಿಂದ ತೆಗೆದುಕೊಳ್ಳಬಹುದು. ಅಥವಾ 'ಗ್ರೂಪ್ ಎ' ದಿಂದಲೇ ಎರಡೂ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಹೊಸ ಕರಡು ಹೇಳುತ್ತದೆ.