ಉಪ್ಪಳ: ಉಪ್ಪಳ-ವಿಟ್ಲ-ಪುತ್ತೂರು ಮಧ್ಯೆ ಸಂಚರಿಸುವ ಕರ್ನಾಟಕ ಸಾರಿಗೆ ನಿಗಮದ ಬಸ್ಸಿನ ಸಿಬ್ಬಂದಿ ಬಳಿಯಿದ್ದ 11,112ರೂ. ಮೊತ್ತವನ್ನು ಕಳವುಗೈಯಲಾಗಿದೆ. ಉಪ್ಪಳದಲ್ಲಿ ಹಾಲ್ಟ್ ಆಗುವ ಬಸ್ಸನ್ನು ನಗರದ ರೈಲ್ವೆ ನಿಲ್ದಾಣ ಸನಿಹದ ಅಯ್ಯಪ್ಪ ಮಂದಿರ ವಠಾರದಲ್ಲಿ ನಿಲುಗಡೆಗೊಳಿಸಿ, ಅಂದಿನ ಕಲೆಕ್ಷನ್ ಮೊತ್ತ, ಟಿಕೆಟ್, ದಾಖಲೆ ಪತ್ರಗಳನ್ನು ಮರದ ಪೆಟ್ಟಗೆಯಲ್ಲಿರಿಸಿ ಬೀಗಹಾಕಿ, ತಮ್ಮ ಶೆಡ್ಡಿನಲ್ಲಿರಿಸಿ ನಿದ್ರಿಸಿದ್ದರು. ಬೆಳಗ್ಗೆ ಎದ್ದು ನೋಡುವಾಗ ಪೆಟ್ಟಿಗೆ ತಮ್ಮ ಕೊಠಡಿಯಿಂದ ಅಲ್ಪ ದೂರ ಕಂಡುಬಂದಿದ್ದು, ಇದರಲ್ಲಿದ್ದ 11 112ರೂ, ನಗದು ನಾಪತ್ತೆಯಾಗಿತ್ತು. ಈ ಬಗ್ಗೆ ನಿರ್ವಾಹಕ ಮಲ್ಲಿಕಾರ್ಜುನ ಹನ್ಸಾಲಿ ಹಾಗೂ ಚಾಲಕ ಪ್ರಶಾಂತ್ ಮಂಜೇಶ್ವರ ಠಾಣೆ ಪೊಲೀಸರಿಗೆ ನೀಡಿದ ದೂರಿನನ್ವಯ ಕೇಸು ದಾಖಲಿಸಿಕೊಂಡಿದ್ದಾರೆ. ಮಂದಿರ ವಠಾರದ ಸಿಸಿ ಕ್ಯಾಮರಾ ತಪಾಸಣೆ ನಡೆಸಿದಾಗ ವ್ಯಕ್ತಿಯೊಬ್ಬ ನಸುಕಿಗೆ ಈ ಪ್ರದೇಶದಲ್ಲಿ ನಡೆದುಹೋಗುತ್ತಿರುವ ದೃಶ್ಯ ಪತ್ತೆಯಾಗಿದ್ದು, ಪೊಲಿಸರು ತನಿಖೆ ಮುಂದುವರಿಸಿದ್ದಾರೆ.