HEALTH TIPS

ಜಂಟಿ ನಿರ್ದೇಶಕರಾಗಿ ಇ.ಡಿಯ 11 ಕೇಡರ್‌ ಅಧಿಕಾರಿಗಳಿಗೆ ಬಡ್ತಿ: ಇದೇ ಮೊದಲು

        ವದೆಹಲಿ: ಜಾರಿ ನಿರ್ದೇಶನಾಲಯದ ಕೇಡರ್‌ ದರ್ಜೆಯ 11 ಅಧಿಕಾರಿಗಳನ್ನು ಕೇಂದ್ರ ಸರ್ಕಾರ ಜಂಟಿ ನಿರ್ದೇಶರನ್ನಾಗಿ ಪದೋನ್ನತಿ ನೀಡಿದೆ.

          ಇಷ್ಟೊಂದು ಪ್ರಮಾಣದ ಕೇಡರ್ ಅಧಿಕಾರಿಗಳನ್ನು ಒಂದೇ ಬಾರಿಗೆ ಜಂಟಿ ನಿರ್ದೇಶಕರಾಗಿ ಬಡ್ತಿ ನೀಡಿರುವುದು ಇದೇ ಮೊದಲು ಎನ್ನಲಾಗಿದೆ.

          ಈ ಹಿಂದೆ ಒಂದೊ ಎರಡು ಅಧಿಕಾರಿಗಳಿಗೆ ಮಾತ್ರ ಬಡ್ತಿ ನೀಡಲಾಗುತ್ತಿತ್ತು ಎಂದು ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ.

            ಕೇಂದ್ರ ಹಣಕಾಸು ಸಚಿವಾಲಯದ ಕಂದಾಯ ಇಲಾಖೆ 11 ಮಂದಿಗೆ ಬಡ್ತಿ ನೀಡಿ ಮಂಗಳವಾರ ಆದೇಶ ಹೊರಡಿಸಿದೆ.

              ಜಂಟಿ ನಿರ್ದೇಶಕ ಹುದ್ದೆಯು ಜಾರಿ ನಿರ್ದೇಶನಾಲಯದಲ್ಲಿ ಉನ್ನತ ಆಡಳಿತಾತ್ಮಕ ಸ್ಥಾನವಾಗಿದ್ದು, ಹಣದ ವರ್ಗಾವಣೆ ಮತ್ತು ವಿದೇಶಿ ವಿನಿಮಯ ಉಲ್ಲಂಘನೆಗೆ ಸಂಬಂಧಿಸಿದ ತನಿಖೆಗಳನ್ನು ಮೇಲ್ವಿಚಾರಣೆ ಮಾಡಲು ಈ ಸ್ತರದ ಅಧಿಕಾರಿಗಳನ್ನು ನಿಯೋಜಿಸಲಾಗುತ್ತದೆ.

27 ವಲಯ ಅಧಿಕಾರಿಗಳು ಸೇರಿದಂತೆ ಜಾರಿ ನಿರ್ದೇಶನಾಲಯಕ್ಕೆ ದೇಶದಾದ್ಯಂತ 30 ಜಂಟಿ ನಿರ್ದೇಶಕರ ಹುದ್ದೆ ಇದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries