HEALTH TIPS

ಸ್ಥಳೀಯಾಡಳಿತ ಚುನಾವಣೆ: ವಾರ್ಡ್ ಪುನರ್ ನಿರ್ಣಯದೊಂದಿಗೆ 1200 ಹೊಸ ವಾರ್ಡ್‍ಗಳನ್ನು ರಚನೆಗೆ ಪ್ರಯತ್ನಿಸುತ್ತಿರುವ ಸರ್ಕಾರ: ವರದಿ

                  ತಿರುವನಂತಪುರಂ: ಮುಂದಿನ ವರ್ಷ ನಡೆಯಲಿರುವ ಸ್ಥಳೀಯಾಡಳಿತ  ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ವಾರ್ಡ್ ಗಳನ್ನು ಪುನರ್ ವಿಂಗಡಿಸಲು ಸರ್ಕಾರ ಮುಂದಾಗಿದೆ.

                ಪ್ರಸ್ತುತ ವಾರ್ಡ್‍ಗಳನ್ನು ವಿಭಜಿಸಿ ಒಗ್ಗೂಡಿಸಿ ಎಡ ಮತಗಳು ಬಹುಮತ ಪಡೆಯುವ ಮೂಲಕ ಗೆಲುವು ಸಾಧಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಅದಕ್ಕಾಗಿ 1200 ಹೊಸ ವಾರ್ಡ್‍ಗಳನ್ನು ರಚಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎನ್ನಲಾಗಿದೆ.

            2010ರಲ್ಲಿ ವಾರ್ಡ್ ಗಳನ್ನು ಸಂಪೂರ್ಣವಾಗಿ ಪುನರ್ ವಿಂಗಡಣೆ ಮಾಡಲಾಗಿತ್ತು.. ಇದು 2001 ರ ಜನಗಣತಿಯನ್ನು ಆಧರಿಸಿ ನಡೆಸಲಾಗಿತ್ತು. ಆದರೆ ಬಳಿಕ ಜನಗಣತಿ ನಡೆದಿದ್ದು 2011ರಲ್ಲಿ. ಅದರ ಆಧಾರದ ಮೇಲೆ ವಾರ್ಡ್ ಪುನರ್ ವಿಂಗಡಣೆ ಮಾಡಿಲ್ಲ. ಇದರ ಆಧಾರದ ಮೇಲೆ ವಾರ್ಡ್ ಮರು ನಿರ್ಣಯಕ್ಕೆ ಸಿದ್ಧತೆ ನಡೆಸಲಾಗಿದೆ. 2015ರಲ್ಲಿ ಕೆಲವು ವಾರ್ಡ್‍ಗಳನ್ನು ಮರು ಮೌಲ್ಯಮಾಪನ ಮಾಡಲಾಗಿತ್ತು. ಅಂದು 28 ಮುನಿಸಿಪಾಲಿಟಿಗಳು ಮತ್ತು ಕಣ್ಣೂರು ಕಾಪೆರ್Çರೇಷನ್ ಹೊಸದಾಗಿ ರಚನೆಯಾದವು. ಆದರೆ ಪಂಚಾಯಿತಿ ಮಟ್ಟದಲ್ಲಿ ಪುನರ್ ವಿಂಗಡಣೆಗೆ ನ್ಯಾಯಾಲಯ ತಡೆ ನೀಡಿತ್ತು.

                ಕಡ್ಡಾಯವಾಗಿ ವಾರ್ಡ್ ಮರುನಿರ್ಣಯಕ್ಕೆ ಅವಕಾಶವಿಲ್ಲ. ಆದ್ದರಿಂದ ಸರ್ಕಾರ ಹಾಗೂ ಸ್ಥಳೀಯಾಡಳಿತದ ಹಿತಾಸಕ್ತಿಗೆ ಅನುಗುಣವಾಗಿ ಮರುಮೌಲ್ಯಮಾಪನ ನಡೆಯಲಿದೆ.

             ರಾಜ್ಯದಲ್ಲಿ ಮರು ನಿರ್ಣಯದ ಅಧಿಕಾರ ಅಧ್ಯಕ್ಷ ಕಮಿಷನರ್ ಮತ್ತು ಸರ್ಕಾರದಿಂದ ನೇಮಿಸಲ್ಪಟ್ಟ ನಾಲ್ಕು ಸದಸ್ಯರನ್ನು ಒಳಗೊಂಡಿರುವ ಡಿಲಿಮಿಟೇಶನ್ ಆಯೋಗದ್ದಾಗಿದೆ. ಸರ್ಕಾರದ ಅಧಿಸೂಚನೆಯಂತೆ ಪ್ರಾಧಿಕಾರವನ್ನು ರಚಿಸಲಾಗುವುದು. ಮರು ನಿರ್ಣಯದ ಶಿಫಾರಸುಗಳನ್ನು ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯದರ್ಶಿಗಳು ಡಿಲಿಮಿಟೇಶನ್ ಆಯೋಗಕ್ಕೆ ನೀಡಲಿದ್ದಾರೆ. ವಾರ್ಡ್‍ಗಳ ಮಿತಿಗಳ ಬಗ್ಗೆ ಕರಡು ಸೂಚನೆ ನೀಡಿದಾಗ ಮಾತ್ರ ದೂರು ನೀಡಬಹುದು. ನಂತರ ವಿಚಾರಣೆ ಇತ್ಯಾದಿ ನಡೆಸಿ ದೂರುಗಳನ್ನು ಪರಿಹರಿಸಲಾಗುತ್ತದೆ. ಆಗ ನ್ಯಾಯಾಲಯವೇ ಆಶ್ರಯವಾಗುತ್ತದೆ.               ಇದೇ ವೇಳೆ ಕೇರಳದಂತಹ ರಾಜ್ಯದಲ್ಲಿ ವಾರ್ಡ್ ಮರುನಿರ್ಣಯದಲ್ಲಿ ಸ್ವಲ್ಪವೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಕೆಲ ಅಧಿಕಾರಿಗಳು.

                ಗ್ರಾಮಸಭೆ, ನೆರೆಹೊರೆ ಕೂಟಗಳು(ಸ್ವಸಹಾಯ ಸಂಘ, ಕುಟುಂಬಶ್ರೀ) ಸೇರಿದಂತೆ ವಾರ್ಡ್‍ಗಳಲ್ಲಿ ಗೊಂದಲ ಉಂಟಾಗಲಿದೆ. ವಾರ್ಡ್‍ಗೆ ಮರು ನೇಮಕ ಮಾಡುವುದರಿಂದ ಕಾನೂನು ತೊಡಕು ಉಂಟಾಗುತ್ತದೆ ಎಂದು ಅಧಿಕಾರಿಗಳು ಸೂಚಿಸುತ್ತಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries