ಗುರುವಾಯೂರು: ಗುರುವಾಯೂರಿನಲ್ಲಿ ಕಳೆದ ಭಾನುವಾರ 129 ವಿವಾಹಗಳು ನಡೆದಿವೆ. ಅಂದು ದೇವಸ್ಥಾನಕ್ಕೆ ವಿವಿಧ ವಸ್ತುಗಳಲ್ಲಿ 67 ಲಕ್ಷ ರೂಪಾಯಿ ಆದಾಯ ಬಂದಿದೆ.
ನಾಲಂಬಲಗಳನ್ನು ಕೂಲರ್‍ಗಳಿಂದ ತಂಪಾಗಿಸಿದರೂ ಮದುವೆ ಮಂಟಪದಲ್ಲಿ ಫ್ಯಾನ್ ಕೂಡ ಇರಲಿಲ್ಲ. ತೀವ್ರ ಸೆಖೆಯಲ್ಲಿ ವಧು-ವರರು ಬೆವರುತ್ತಿದ್ದರು.
ಸುಮಾರು 1800 ಮಂದಿ ತುಪ್ಪ ದೀಪದ ಸೇವೆ ಸಲ್ಲಿಸಿದ್ದಾರೆ. ಈ ಮೂಲಕ 20 ಲಕ್ಷ ರೂ.ಆದಾಯ ಬಂದಿದೆ. ತುಲಾಭಾರವೂ ಬೃಹತ್ ಸಂಖ್ಯೆಯಲ್ಲಿ ನಡೆದಿದ್ದು 16 ಲಕ್ಷ ರೂ.ಆದಾಯ ಸಂಗ್ರಹವಾಗಿದೆ.
452 ಮಕ್ಕಳಿಗೆ ಅನ್ನಪ್ರಾಶನ ವಿಧಿ ನಡೆಸಲಾಗಿದೆ. ಈ ಮೂಲಕ ಐದೂವರೆ ಲಕ್ಷ ರೂಪಾಯಿ ಮೌಲ್ಯದ ಹಾಲು ಪಾಯಸ ಸೇವೆ ದಾಖಲಾಗಿದೆ. ದರ್ಶನಕ್ಕೆ ನೂಕುನುಗ್ಗಲು ಇದ್ದ ಕಾರಣ ಕೊಡಿಮರ ಮೂಲಕ ಭಕ್ತರು ಅಂಗಣ ಪ್ರವೇಶ ಮಾಡಬೇಕಾಯಿತು.