ನವದೆಹಲಿ (PTI): ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರ ಪ್ರಾತಿನಿಧ್ಯದ ಪ್ರಮಾಣ ಕಡಿಮೆ ಮಟ್ಟದಲ್ಲೇ ಮುಂದುವರಿದಿದೆ. ಐದನೇ ಹಂತದಲ್ಲಿ ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಮಹಿಳೆಯರ ಪ್ರಮಾಣ ಶೇ 12 ರಷ್ಟಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ತಿಳಿಸಿದೆ.

ಐದನೇ ಹಂತದ ಮತದಾನ ಮೇ 20 ರಂದು ನಡೆಯಲಿದ್ದು, ಕಣದಲ್ಲಿ ಒಟ್ಟು 695 ಅಭ್ಯರ್ಥಿಗಳಿದ್ದಾರೆ. ಅದರಲ್ಲಿ ಮಹಿಳಾ ಅಭ್ಯರ್ಥಿಗಳ ಸಂಖ್ಯೆ 82 ಮಾತ್ರ. ಮೊದಲ ನಾಲ್ಕು ಹಂತಗಳಲ್ಲೂ ಮಹಿಳಾ ಅಭ್ಯರ್ಥಿಗಳ ಪ್ರಮಾಣ ತುಂಬಾ ಕಡಿಮೆಯಿತ್ತು.
ಕಣದಲ್ಲಿರುವ ಅಭ್ಯರ್ಥಿಗಳಲ್ಲಿ 122 ಮಂದಿ (ಶೇ 18) ಗಂಭೀರ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. 29 ಮಂದಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂಬ ಅಂಶ ವರದಿಯಲ್ಲಿದೆ.
ಶೇ 33 ಅಭ್ಯರ್ಥಿಗಳು ಕೋಟ್ಯಧಿಪತಿಗಳಾಗಿದ್ದು, ಸರಾಸರಿ ಆಸ್ತಿ ₹ 3.56 ಕೋಟಿ ಆಗಿದೆ. ಶ್ರೀಮಂತ ಅಭ್ಯರ್ಥಿಗಳಲ್ಲಿ ಮೊದಲ ಮೂರು ಸ್ಥಾನಗಳಲ್ಲಿರುವವರು ₹ 110 ರಿಂದ ₹ 212 ಕೋಟಿಯವರೆಗೆ ಆಸ್ತಿ ಘೋಷಿಸಿಕೊಂಡಿದ್ದಾರೆ.
ಐದನೇ ಹಂತದ ಮಾಹಿತಿ695: ಒಟ್ಟು ಅಭ್ಯರ್ಥಿಗಳು
ಶೇ 23: ಅಪರಾಧ ಪ್ರಕರಣ ಎದುರಿಸುತ್ತಿರುವವರು
ಶೇ 18: ಗಂಭೀರ ಅಪರಾಧ ಪ್ರಕರಣ ಎದುರಿಸುತ್ತಿರುವವರು
ಶೇ 33: ಕೋಟ್ಯಧಿಪತಿಗಳು
ಮಹಿಳಾ ಅಭ್ಯರ್ಥಿಗಳ ವಿವರಮತದಾನದ 1ನೇ ಹಂತ: 35 ಅಭ್ಯರ್ಥಿಗಳು; ಶೇ8
ಮತದಾನದ 2ನೇ ಹಂತ: 100 ಅಭ್ಯರ್ಥಿಗಳು; ಶೇ 8
ಮತದಾನದ 3ನೇ ಹಂತ: 123 ಅಭ್ಯರ್ಥಿಗಳು; ಶೇ 9
ಮತದಾನದ 4ನೇ ಹಂತ: 170 ಅಭ್ಯರ್ಥಿಗಳು; ಶೇ10
ಮತದಾನದ 5ನೇ ಹಂತ: 82 ಅಭ್ಯರ್ಥಿಗಳು; ಶೇ12