ಕಾಸರಗೋಡು : ಜಿಲ್ಲೆಯಲ್ಲಿ ಮಳೆಗಾಲ ಪೂರ್ವ ಸ್ವಚ್ಛತಾಕಾರ್ಯ ಪೂರ್ಣಗೊಂಡಿದ್ದು, 38 ಗ್ರಾಮ ಪಂಚಾಯಿತಿ ಹಾಗೂ ಮೂರು ನಗರಸಭೆಗಳ ವಾರ್ಡ್ ಮಟ್ಟದಲ್ಲಿ ಸಾರ್ವಜನಿಕ ಸ್ಥಳ ಹಾಗೂ ಮನೆಗಳನ್ನು ಕೇಂದ್ರೀಕರಿಸಿ ಸ್ವಚ್ಛತಾ ಕಾರ್ಯಗಳನ್ನು ನಡೆಸಲಾಯಿತು.
'ಕಸ ಮುಕ್ತ ನವ ಕೇರಳ' ಕಾರ್ಯಕ್ರಮದ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮುಂಗಾರು ಪೂರ್ವ ಸ್ವಚ್ಛತಾ ಅಭಿಯಾನ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಸಿವಿಲ್ ಸ್ಟೇಷನ್ ವಠಾರದಲ್ಲಿ ನೆರವೇರಿಸಿದರು. ನಂತರ ಜಿಲ್ಲೆಯ 12 ಕರಾವಳಿ ಪ್ರದೇಶ, ಸ್ಥಳೀಯಾಡಳಿತ ಸಂಸ್ಥೆಗಳು, ಸಮುದ್ರ ದಡದಲ್ಲಿ ಶುಚೀಕರಣನಡೆಸಲಾಯಿತು. ಮಂಜೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣ್ವತೀರ್ಥ ಕುಂಡುಕೊಳಕೆಯಿಂದ ಕಡಪುರದವರೆಗಿನ 6.4 ಕಿ.ಮೀ, ಮಂಗಲ್ಪಾಡಿ, ಕುಂಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಯಿಪ್ಪಾಡಿ, ಕೊಪ್ಪಳ, ಚೇರಂಗೈ, ಮೊಗ್ರಾಲ್‍ಪುತ್ತೂರು, ಸಿಪಿಸಿಆರ್‍ಐ ಕಾವುಗೋಳಿ ಕರಾವಳಿ, ತಳಂಗರೆ ಮಕ್ಕಳ ಉದ್ಯಾನದಲ್ಲಿ ಶುಚೀಕರಣ ನಡೆಸಲಾಯಿತು.
ಚೆಮ್ನಾಡ್, ಉದುಮ, ಪಳ್ಳಿಕೆರೆ, ಪಡನ್ನಕ್ಕಾಡ್, ಅಜಾನೂರು, ನೀಲೇಶ್ವರ, ವಲಿಯಪರಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶುಚೀಕರಣ ನಡೆಸಲಾಯಿತು. ಹಸಿರು ಕ್ರಿಯಾಸೇನೆ, ಕುಟುಂಬಶ್ರೀ ಕಾರ್ಯಕರ್ತರು, ಸ್ವಯಂಸೇವಕರು, ಕ್ಲಬ್ ಕಾರ್ಯಕರ್ತರು ಮತ್ತು ವಿಪತ್ತು ನಿರ್ವಹಣಾ ಸಿಬ್ಬಂದಿ ಸಹಕಾರದೊಂದಿಗೆ ಸ್ವಚ್ಛತಾಕಾರ್ಯ ನಡೆಸಲಾಯಿತು. ಕರಾವಳಿ ಸ್ವಚ್ಛತೆಯ ಅಂಗವಾಗಿ ಸಂಗ್ರಹಿಸಿದ 300 ಕೆಜಿಗೂ ಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯವನ್ನು ಕ್ಲೀನ್ ಕೇರಳ ಕಂಪನಿಗೆ ಹಸ್ತಾಂತರಿಸಲಾಯಿತು. ಶುಚಿತ್ವ, ಆರೋಗ್ಯ ಇಲಾಖೆ ಕೌನ್ಸಿಲರ್‍ಗಳುನೌಕರರು, ಹಸಿರು ಕ್ರಿಯಾಸೇನೆ, ಕುಟುಂಬಶ್ರೀ ಕಾರ್ಯಕರ್ತರು ಮತ್ತು ಎನ್‍ಎಸ್‍ಎಸ್ ಸ್ವಯಂಸೇವಕರು ಭಾಗವಹಿಸಿದ್ದರು.