ಥಾಣೆ: ಅಪ್ರಾಪ್ತನೊಬ್ಬ ತನ್ನ ಮೇಲೆ ನಿರಂತರ ಅತ್ಯಾಚಾರವೆಸಗಿ ಮದುವೆಯಾಗಲು ಪೀಡಿಸುತ್ತಿದ್ದಾನೆ ಎಂದು ಆರೋಪಿಸಿ 14 ವರ್ಷದ ಬಾಲಕಿಯೊಬ್ಬಳು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಪೊಲೀಸ್ ಠಾಣೆಯೊಂದರಲ್ಲಿ ಶನಿವಾರ ದೂರು ದಾಖಲಿಸಿದ್ದಾಳೆ.
ಥಾಣೆ: ಅಪ್ರಾಪ್ತನೊಬ್ಬ ತನ್ನ ಮೇಲೆ ನಿರಂತರ ಅತ್ಯಾಚಾರವೆಸಗಿ ಮದುವೆಯಾಗಲು ಪೀಡಿಸುತ್ತಿದ್ದಾನೆ ಎಂದು ಆರೋಪಿಸಿ 14 ವರ್ಷದ ಬಾಲಕಿಯೊಬ್ಬಳು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಪೊಲೀಸ್ ಠಾಣೆಯೊಂದರಲ್ಲಿ ಶನಿವಾರ ದೂರು ದಾಖಲಿಸಿದ್ದಾಳೆ.
ಆರೋಪಿ ಬಾಲಕ 2023ರಲ್ಲಿ ಬಾಲಕಿಯ ಜೊತೆ ಸ್ನೇಹ ಬೆಳೆಸಿಕೊಂಡಿದ್ದಾನೆ.
ಧಾರ್ಮಿಕ ಸ್ಥಳವೊಂದಕ್ಕೆ ಆಹ್ವಾನಿಸಿದ ಬಳಿಕ ಆರೋಪಿ ಜೊತೆ ಮಾತನಾಡುವುದನ್ನು ಬಾಲಕಿ ನಿಲ್ಲಿಸಿದ್ದಳು. ಸಂಬಂಧ ಮುಂದುವರಿಸದಿದ್ದರೆ ಹಲ್ಲೆ ಮಾಡುವ ಬೆದರಿಕೆಯೂ ಒಡ್ಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೀರಾ ಭಯಂದರ್ ವಸೈ ವಿರಾರ್ ಕಮೀಷನರೇಟ್ ವ್ಯಾಪ್ತಿಯ ಕಾಶಿಗಾಂವ್ ಪೊಲೀಸ್ ಠಾಣೆಯಲ್ಲಿ ಭಾರತೀಯ ಡಂಡ ಸಂಹಿತೆ, ಪೋಕ್ಸೊ ಕಾಯ್ದೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಾಗಿದೆ.