ಛತ್ರಪತಿ ಸಂಭಾಜಿನಗರ: 52 ವರ್ಷಗಳ ಹಿಂದೆ ಜಯಕವಾಡಿ ಅಣೆಕಟ್ಟು ನಿರ್ಮಾಣದ ವೇಳೆ ಹಾನಿಗೊಂಡಿದ್ದ 14ನೇ ಶತಮಾನದ ಶಿವ ದೇಗುಲವನ್ನು ಜೀರ್ಣೋದ್ಧಾರಗೊಳಿಸಲಾಗುವುದು ಎಂದು ಭಾರತೀಯ ಪುರಾತತ್ವ ಇಲಾಖೆ ಗುರುವಾರ ತಿಳಿಸಿದೆ.
ಛತ್ರಪತಿ ಸಂಭಾಜಿನಗರ: 52 ವರ್ಷಗಳ ಹಿಂದೆ ಜಯಕವಾಡಿ ಅಣೆಕಟ್ಟು ನಿರ್ಮಾಣದ ವೇಳೆ ಹಾನಿಗೊಂಡಿದ್ದ 14ನೇ ಶತಮಾನದ ಶಿವ ದೇಗುಲವನ್ನು ಜೀರ್ಣೋದ್ಧಾರಗೊಳಿಸಲಾಗುವುದು ಎಂದು ಭಾರತೀಯ ಪುರಾತತ್ವ ಇಲಾಖೆ ಗುರುವಾರ ತಿಳಿಸಿದೆ.
' ಮಹಾರಾಷ್ಟ್ರದಲ್ಲಿ ಇದೇ ಮೊದಲ ಬಾರಿಗೆ ಇಂತಹ ಜೀರ್ಣೋದ್ಧಾರ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ' ಎಂದು ಇಲಾಖೆ ಹೇಳಿದೆ.
'ಶೆವ್ಟ ಮತ್ತು ಸಾವಖೇಡ ಗ್ರಾಮಗಳಲ್ಲಿದ್ದ ಎರಡು ದೇಗುಲಗಳು 1972ರಲ್ಲಿ ಅಣೆಕಟ್ಟು ನಿರ್ಮಾಣವಾದ ಬಳಿಕ ನೀರಿನಡಿ ಮುಳುಗಡೆಯಾಗಿದ್ದವು. ಆದರೆ, ದೇಗುಲದ ಕಲ್ಲುಗಳನ್ನು ಸಂರಕ್ಷಿಸಲಾಗಿತ್ತು' ಎಂದು ತಿಳಿಸಿದೆ.
' ಶೆವ್ಟದಲ್ಲಿನ ದೇಗುಲದ ಕಲ್ಲುಗಳಿಗೆ ಸಂಖ್ಯೆಗಳನ್ನು ನೀಡಲಾಗಿದ್ದು, ಇದರ ಆಧಾರದಲ್ಲಿ ದೇಗುಲ ಮರುನಿರ್ಮಾಣ ಮಾಡಲಾಗುವುದು. ರಾಜ್ಯ ಸರ್ಕಾರವು ₹3.53 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಎರಡು-ಮೂರು ತಿಂಗಳಲ್ಲಿ ಕಾಮಗಾರಿ ಆರಂಭವಾಗುತ್ತದೆ' ಎಂದು ಮಾಹಿತಿ ನೀಡಿದೆ.
ಜಯಕವಾಡಿ ಅಣೆಕಟ್ಟು ನಿರ್ಮಾಣದ ಬಳಿಕ ಸುಮಾರು 100 ಗ್ರಾಮಗಳು ಜಲಾವೃತಗೊಂಡಿದ್ದವು.