ಬದಿಯಡ್ಕ: 2023-24ನೇ ಸಾಲಿ ಕೇರಳ ರಾಜ್ಯ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಎಲ್ಲಾ 24 ವಿದ್ಯಾರ್ಥಿಗಳೂ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಹದಿನೈದು ಮಂದಿ ವಿದ್ಯಾರ್ಥಿಗಳು 10 ವಿಷಯಗಳಲ್ಲಿಯೂ ಎಪ್ಲಸ್ ಅಂಕ, 2 ವಿದ್ಯಾರ್ಥಿಗಳು 9 ವಿಷಯಗಳಲ್ಲಿ ಎ ಪ್ಲಸ್ ಅಂಕ ಪಡೆದು ಶಾಲೆಗೆ ಹಾಗೂ ಹೆತ್ತವರಿಗೆ ಕೀರ್ತಿಯನ್ನು ತಂದಿರುತ್ತಾರೆ.
ಹತ್ತನೇ ತರಗತಿಯ ಹೆಮ್ಮೆಯ ವಿದ್ಯಾರ್ಥಿಗಳ ಭವಿಷ್ಯ ಉತ್ತಮವಾಗಿರಲಿ ಎಂದು ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಆಡಳಿತ ಮಂಡಳಿ ಹಾಗೂ ರಕ್ಷಕ ಶಿಕ್ಷಕ ಸಂಘ ಅಭಿನಂದನೆಯನ್ನು ಸಲ್ಲಿಸಿದೆ. ಎಲ್ಲಾ ಹತ್ತು ವಿಷಯಗಳಲ್ಲಿಯೂ ಎ ಪ್ಲಸ್ ಅಂಕ ಪಡೆದವರು ಎ ಬ್ರಿಜೇಶ್ ಮೋಹನ್, ಶ್ರೀಕೃಷ್ಣ ಶರ್ಮ ಎ, ಶ್ರೀಶ ಎಮ್, ಶ್ರೀವತ್ಸ ಎಮ್ ಜೆ, ತನುಶ್ ರೈ ಜಿ, ತೇಜಸ್ ರೈ, ತೇಜಸ್ವಿ ಕೆ, ಎ ಸ್ಮೃತಿ, ಆರಾಧ್ಯ ರೈ ಕೆ, ಧರಣಿ ಎಸ್, ಸ್ಮøತಿ ಭಟ್ ಕೆ, ಲಕ್ಷ್ಯ ಎಮ್ ಶೆಟ್ಟಿ, ಸುಮೇಧಾ ಕೆ, ಸ್ವಸ್ತಿ ಕುಳೂರು, ವೈಶಾಲಿ ವಿ ಹಾಗೂ ಪೂಜಶ್ರೀ ಮತ್ತು ಪ್ರಣವಿ ಕೆ. 9 ವಿಷಯಗಳಲ್ಲಿ ಎ ಪ್ಲಸ್ ಅಂಕ ಪಡೆದಿರುತ್ತಾರೆ.