ನವದೆಹಲಿ: ವಾಣಿಜ್ಯ ಕರೆಗಳಿಗೆ ವಿಶೇx ಸಂಖ್ಯೆ ನೀಡಲು ಕೇಂದ್ರ ದೂರಸಂಪರ್ಕ ಸಚಿವಾಲಯ ನಿರ್ಧರಿಸಿದೆ. ಬಹು ಸಂಖ್ಯೆಗಳಿಂದ ಬರುವ ಕರೆಗಳಿಂದ ಬಳಕೆದಾರರು ಎದುರಿಸುತ್ತಿರುವ ಸಮಸ್ಯೆಯನ್ನು ಪರಿಹರಿಸುವುದು ಗುರಿಯಾಗಿದೆ.
160 ರಿಂದ ಪ್ರಾರಂಭವಾಗುವ ಹತ್ತು ಅಂಕೆಗಳನ್ನು ವಾಣಿಜ್ಯ ವ್ಯವಹಾರ ಕರೆಗಳಿಗೆ ಅನುಮತಿಸಲಾಗುತ್ತದೆ. ಅಗತ್ಯವಿರುವವರು ಮಾತ್ರ ಅಂತಹ ಸಂಖ್ಯೆಗಳಿಂದ ಕರೆಗಳನ್ನು ಸ್ವೀಕರಿಸಬಹುದು.
140 ರಿಂದ ಪ್ರಾರಂಭವಾಗುವ ಸಂಖ್ಯೆಗಳನ್ನು ಟೆಲಿಮಾರ್ಕೆಟಿಂಗ್ ಕಂಪನಿಗಳಿಗೆ ನೀಡಲಾಗಿದೆ. ಗ್ರಾಹಕರು ಸಾಮಾನ್ಯವಾಗಿ ಇಂತಹ ಕರೆಗಳಿಗೆ ಪ್ರತಿಕ್ರಿಯಿಸುವುದಿಲ್ಲ. ನೈಜ ಕಂಪನಿಗಳು ತಮ್ಮ 10-ಅಂಕಿಯ ಸಂಖ್ಯೆಯನ್ನು ಬಳಸುವುವ ಕಾರಣದಿಂದ ಇದರ ಲಾಭವನ್ನು ವಂಚಕರು ಪಡೆಯುತ್ತಿದ್ದಾರೆ.