ಕಾಸರಗೋಡು: ಮುಸ್ಲಿಂ ಲೀಗ್ ಮುಖಂಡ, ಮಂಜೇಶ್ವರ ಕ್ಷೇತ್ರದ ಮಾಜಿ ಶಾಸಕ ಎಂ.ಸಿ ಕಮರುದ್ದೀನ್ ಹಾಗೂ ಪಕ್ಷದ ಮಾಜಿ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದ ಪಿ.ಕೆ ಪೂಕೋಯ ತಙಳ್ ವಿರುದ್ಧ ಮತ್ತೆ 16ಕೇಸು ದಾಖಲಾಗಿದೆ.
ಆರು ಕೇಸು ಚಂದೇರ ಪೊಲೀಸ್ ಠಾಣೆ, ತಲಾ ಐದು ಕೇಸುಗಳನ್ನು ಕಣ್ಣೂರು ಹಾಗೂ ಕ್ರೈಂ ಬ್ರಾಂಚ್ ನೇರವಾಗಿ ದಾಖಲಿಸಿಕೊಂಡಿದೆ. ಈ ಮೂಲಕ ಕಾಸರಗೋಡಿನ ಫ್ಯಾಶನ್‍ಗೋಲ್ಡ್ ಠೇವಣಿ ವಂಚನಾ ಪ್ರಕರಣಕ್ಕೆ ಸಂಬಂಧಿಸಿ ದಾಖಲಾದ ಕೇಸುಗಳ ಸಂಖ್ಯೆ 184ಕ್ಕೇರಿದೆ. ಈ ಹಿಂದೆ ದಾಖಲಾಗಿರುವವುಗಳಲ್ಲಿ 25ಕೇಸುಗಳಿಗೆ ಸಂಬಂಧಿಸಿ ಕ್ರೈಂ ಬ್ರಾಂಚ್ ಆರೋಪ ಪಟ್ಟಿ ಸಲ್ಲಿಸಿದೆ. ಫ್ಯಾಶನ್‍ಗೋಲ್ಡ್ ಠೇವಣಿ ವಂಚನಾ ಪ್ರಕರಣ ಕಾಸರಗೋಡಿನಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು.