HEALTH TIPS

ಸೆ.17-ಅ.16ರ ನಡುವೆ ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ: ಆಯೋಗ

       ಕೊಲಂಬೊ: ಶ್ರೀಲಂಕಾದಲ್ಲಿ ಸೆಪ್ಟೆಂಬರ್ 17 ಮತ್ತು ಅಕ್ಟೋಬರ್ 16 ರ ನಡುವೆ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ ಎಂದು ದೇಶದ ಚುನಾವಣಾ ಆಯೋಗ ಗುರುವಾರ ಪ್ರಕಟಿಸಿದೆ.

           ಸಂವಿಧಾನದ ನಿಬಂಧನೆಗಳ ಪ್ರಕಾರ ನಿಗದಿತ ಅವಧಿಯೊಳಗೆ ಅಧ್ಯಕ್ಷೀಯ ಚುನಾವಣೆ ನಡೆಸಲು ನಾಮನಿರ್ದೇಶನ ಮಾಡುವುದಾಗಿ ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

           ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರು ಹೊಸ ಚಿಹ್ನೆಯಡಿಯಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ನಿರೀಕ್ಷೆಯಿದೆ ಎಂದು ಅವರ ಉನ್ನತ ಸಹಾಯಕರು ಕಳೆದ ತಿಂಗಳು ಹೇಳಿದ್ದರು. ಅವರು ಸ್ಪರ್ಧಿಸಿದರೆ, ತಮ್ಮದೇ ಸಂಪುಟದ ಸಹೋದ್ಯೋಗಿ, ಕಾನೂನು ಸಚಿವ ವಿಜಯದಾಸ ರಾಜಪಕ್ಷ ಅವರನ್ನು ಎದುರಿಸಬೇಕಿದೆ.

           75 ವರ್ಷದ ವಿಕ್ರಮಸಿಂಘೆ ಅವರು ಸದ್ಯ ಎಸ್‌ಎಲ್‌ಪಿಪಿ ಭಾಗವಾಗಿದ್ದಾರೆ. ಸಾಜಿತ್ ಪ್ರೇಮದಾಸ ನಾಯಕತ್ವದ ಪ್ರಮುಖ ವಿರೋಧಪಕ್ಷ ಸಮಗಿ ಜನ ಬಲವೇಗಯಾ ಪಕ್ಷಕ್ಕೂ ಇದರ ಮತ್ತೊಂದು ಗುಂಪು ಬೆಂಬಲ ವ್ಯಕ್ತಪಡಿಸಿದೆ.

              ಶ್ರೀಲಂಕಾದಲ್ಲಿ 2022ರಲ್ಲಿ ತಲೆದೋರಿದ ತೀವ್ರ ಆರ್ಥಿಕ ಬಿಕ್ಕಟ್ಟು ವಿರೋಧಿಸಿ ದೇಶವ್ಯಾಪಿ ನಡೆದ ಪ್ರತಿಭಟನೆಯಲ್ಲಿ ಪ್ರಭಾವಿ ರಾಜಪಕ್ಷ ಕುಟುಂಬದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಅದಾದ ನಂತರ ಪಕ್ಷದ ವಿರುದ್ಧ ವ್ಯಕ್ತವಾದ ಆಕ್ರೋಶದಿಂದಾಗಿ ಎಸ್‌ಎಲ್‌ಪಿಪಿಯ ರಾಜಪಕ್ಷ ಅನುಯಾಯಿಗಳು ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ.

              ದೇಶವನ್ನು ಆರ್ಥಿಕವಾಗಿ ಸುಸ್ಥಿತಿಗೆ ತರುವ ನಿಟ್ಟಿನಲ್ಲಿ ಹೊಸ ನೀತಿ ರೂಪಿಸುವ ಉದ್ದೇಶದಿಂದ ಪಕ್ಷಗಳು ಒಮ್ಮತದಿಂದ ಅಭ್ಯರ್ಥಿಯ ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದೆನ್ನಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries