HEALTH TIPS

ರೆಸ್ಟೋರೆಂಟ್​​ನಲ್ಲಿ ಬಿರಿಯಾನಿ ತಿಂದು ಮಹಿಳೆ ಸಾವು; 178 ಮಂದಿ ತೀವ್ರ ಅಸ್ವಸ್ಥ

 ಕೇರಳ: ರೆಸ್ಟೋರೆಂಟ್​​ನಲ್ಲಿ ಬಿರಿಯಾನಿ ತಿಂದ ಮಹಿಳೆ ಪ್ರಾಣ ಕಳೆದುಕೊಂಡಿದ್ದಾಳೆ. ಸುಮಾರು 178 ಮಂದಿಗೆ ಆಹಾರ ವಿಷವಾಗಿದ್ದು, ಅತಿಸಾರ ಮತ್ತು ವಾಂತಿಯಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ತ್ರಿಶೂರ್​​ನ ಜಿಲ್ಲೆಯೊಂದರಲ್ಲಿ ನಡೆದಿದೆ.

ಈ ಪೈಕಿ ಕುಟಿಲಕ್ಕಡವ್‌ನ ನುಸೈಬಾ (56) ಮೃತ ಮಹಿಳೆ.

ಈಕೆಗೆ ಬಿರಿಯಾನಿ ತಿಂದ ಹೊಟ್ಟೆ ನೋವು ಮತ್ತು ವಾಂತಿ ಕಾಣಿಸಿಕೊಂಡಿದ್ದು, ತ್ರಿಶೂರ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗಿತ್ತು. ನುಸೈಬಾ ಅವರ ಸ್ಥಿತಿ ಹದಗೆಟ್ಟಿದ್ದರಿಂದ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮಂಗಳವಾರ ಮೃತಪಟ್ಟಿದ್ದಾರೆ. ಆಕೆಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿಯ ಆಧಾರದ ಮೇಲೆ ಸಾವಿಗೆ ಕಾರಣ ತಿಳಿಯಲಿದೆ ಎಂದು

ಪೊಲೀಸರು ತಿಳಿಸಿದ್ದಾರೆ. ಫುಡ್ ಪಾಯ್ಸನಿಂಗ್ ನಿಂದ ಆಕೆ ಸಾವನ್ನಪ್ಪಿದ್ದಾಳೆ ಎಂದು ಮೃತಳ ಸಂಬಂಧಿಕರು ಆರೋಪಿಸಿದ್ದಾರೆ.

ಆರೋಗ್ಯ ಇಲಾಖೆ ಅಧಿಕಾರಿಗಳು, ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಮತ್ತು ಪಂಚಾಯತ್ ಅಧಿಕಾರಿಗಳು ಹೇಳಿದ ರೆಸ್ಟೋರೆಂಟ್‌ನಲ್ಲಿ ತಪಾಸಣೆ ನಡೆಸಿದರು. ಕೇರಳದ ಮಾಂಸಾಹಾರಿ ರೆಸ್ಟೋರೆಂಟ್‌ಗಳಲ್ಲಿ 'ಕುಜಿಮಂಟಿ' ಎಂಬ ಬಿರಿಯಾನಿ ಮಾದರಿಯ ಖಾದ್ಯ ಬಹಳ ಫೇಮಸ್. ಈ ಘಟನೆಯ ನಂತರ ಅಧಿಕಾರಿಗಳು ರೆಸ್ಟೋರೆಂಟ್ ಅನ್ನು ಸೀಲ್ ಮಾಡಿದ್ದಾರೆ ಎಂದು ಕೈಪಮಂಗಲಂ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಂಚಾಯತ್ ಅಧ್ಯಕ್ಷೆ ವಿನೀತಾ ಮೋಹನ್ ದಾಸ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.. 'ಪೆರಿಂಜನಂ ಮತ್ತು ಕೈಪಮಂಗಲಂ ಭಾಗದ ಜನರು ಸದ್ಯ ಆಸ್ಪತ್ರೆಯಲ್ಲಿದ್ದಾರೆ. ಇವರಲ್ಲಿ ಕೆಲವರನ್ನು ಕೊಡಂಗಲ್ಲು ಮತ್ತು ಇರಿಂಗಲಕುಡದ ಹಲವು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ರೆಸ್ಟೋರೆಂಟ್‌ನಿಂದ ಆಹಾರದ ಮಾದರಿಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅನೈರ್ಮಲ್ಯ ವಾತಾವರಣದಲ್ಲಿ ರೆಸ್ಟೋರೆಂಟ್ ಆಹಾರ ತಯಾರಿಸುತ್ತಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries