ತಿರುವನಂತಪುರಂ: ಅಕ್ರಮವಾಗಿ 14 ಕೆಎಸ್‍ಆರ್‍ಟಿಸಿ ನೌÀಕರರು ಕೆಲಸಕ್ಕೆ ಗೈರು ಹಾಜರಾಗಿದ್ದು, ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.
ಕೆ.ಎಸ್.ಆರ್.ಟಿ.ಸಿ ಪತ್ತನಾಪುರಂ ಘಟಕದಲ್ಲಿ 2024ರ ಏಪ್ರಿಲ್ 29 ಮತ್ತು 30ರಂದು ಅಕ್ರಮವಾಗಿ ಕರ್ತವ್ಯಕ್ಕೆ ಗೈರುಹಾಜರಾಗಿದ್ದ 10 ಸಾಮಾನ್ಯ ವರ್ಗದ ಚಾಲಕರನ್ನು ವರ್ಗಾವಣೆ ಮಾಡಲಾಗಿದ್ದು, ನಾಲ್ವರು ಪರ್ಯಾಯ ವರ್ಗದ ಚಾಲಕರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಯಾವುದೇ ಎಚ್ಚರಿಕೆ ಮತ್ತು ಸೂಚನೆ ನೀಡದೆ ಕೆಎಸ್‍ಆರ್‍ಟಿಸಿ ನೌಕರರು ಸಾಮೂಹಿಕವಾಗಿ ರಜೆ ಹಾಕಿದ್ದರಿಂದ ಪತ್ತನಾಪುರಂ ಘಟಕದಲ್ಲಿ ಹಲವು ಸೇವೆಗಳನ್ನು ರದ್ದುಗೊಳಿಸಬೇಕಾಯಿತು. ಕೆಎಸ್‍ಆರ್‍ಟಿಸಿ ಸೇವೆಯನ್ನು ಅವಲಂಬಿಸಿದ್ದ ಪ್ರಯಾಣಿಕರಿಗೆ ಸಂಕಷ್ಟ ಉಂಟಾಗಿದ್ದು ವಿಶ್ವಾಸಾರ್ಹತೆಗೆ ಧಕ್ಕೆಯೊದಗಿತು. ಕೆಎಸ್‍ಆರ್‍ಟಿಸಿಗೆ 1,88,665 ರೂ.ಗಳ ಆರ್ಥಿಕ ನಷ್ಟವೂ ಉಂಟು ಮಾಡಿದ ಹಿನ್ನೆಲೆಯಲ್ಲಿ ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಕೆಎಸ್‍ಆರ್‍ಟಿಸಿ ತಿಳಿಸಿದೆ. ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪ್ರಮೋಜ್ ಶಂಕರ್ ಮಾಹಿತಿ ನೀಡಿದರು.
ಕೆ.ಎಸ್.ಆರ್.ಟಿ.ಸಿ ಸೇವೆಯನ್ನೇ ಅವಲಂಬಿಸಿರುವ ಲಕ್ಷಾಂತರ ಪ್ರಯಾಣಿಕರಿದ್ದಾರೆ. ಈ ರೀತಿಯ ಅನಿರೀಕ್ಷಿತವಾಗಿ ಸೇವೆಗಳನ್ನು ರದ್ದುಗೊಳಿಸುವುದರಿಂದ ಕೆಎಸ್‍ಆರ್‍ಟಿಸಿಯ ಸಾಮಾನ್ಯ ಪ್ರಯಾಣಿಕರು ಇತರ ಪ್ರಯಾಣದ ಮಾರ್ಗಗಳನ್ನು ಹುಡುಕುವಂತಾಗುತ್ತದೆ ಮತ್ತು ಒಂದು ವಿಭಾಗದ ನೌಕರರ ಇಂತಹ ಬೇಜವಾಬ್ದಾರಿ ನಡವಳಿಕೆಯನ್ನು ಯಾವುದೇ ರೀತಿಯಲ್ಲಿ ಅನುಮತಿಸಲಾಗುವುದಿಲ್ಲ ಮತ್ತು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.