ಫಿರೋಜ್‌ಪುರ: ಶ್ರೀ ಗುರು ಗ್ರಂಥ ಸಾಹಿಬ್ ಅನ್ನು ಅಪವಿತ್ರಗೊಳಿಸಿದ್ದಾನೆಂದು ಆರೋಪಿಸಿ ಯುವಕನೊಬ್ಬನನ್ನು ಥಳಿಸಿ ಕೊಂದಿರುವ ಅಮಾನವೀಯ ಘಟನೆ ಪಂಜಾಬ್‌ನ ಫಿರೋಜ್‌ಪುರದ ಗುರುದ್ವಾರದಲ್ಲಿ ನಡೆದಿದೆ.
19 ವರ್ಷದ ಯುವಕ ತಲ್ಲಿ ಗುಲಾಮ್ ಗ್ರಾಮದ ನಿವಾಸಿ ಬಕ್ಷೀಶ್ ಸಿಂಗ್ ಅಲಿಯಾಸ್ ಗೋಲಾ ಬಂಡಾಲಾ ಗ್ರಾಮದಲ್ಲಿರುವ ಗುರುದ್ವಾರವನ್ನು ಪ್ರವೇಶಿಸಿದ ನಂತರ ಸಿಖ್ಖರ ಪವಿತ್ರ ಗ್ರಂಥ ಗುರು ಗ್ರಂಥ ಸಾಹಿಬ್ ಅನ್ನು ಹರಿದು ಹಾಕಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಸ್ಥಳದಲ್ಲೇ ಇದ್ದ ಗುಂಪು ಬಕ್ಷೀಶ್ ಸಿಂಗ್ ನನ್ನು ತೀವ್ರವಾಗಿ ಥಳಿಸಿತ್ತು. ನಂತರ ಪೊಲೀಸರು ಯುವಕನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು, ಆದರೆ ಅಷ್ಟರಲ್ಲೇ ಆತ ಸಾವನ್ನಪ್ಪಿದ್ದನು.
ಘಟನೆಯ ವಿಡಿಯೋ ಕೂಡ ಹೊರಬಿದ್ದಿದೆ. ಇದರಲ್ಲಿ ಜನರ ಗುಂಪೊಂದು ಮೊದಲು ಬಕ್ಷೀಶ್‌ನನ್ನು ಸುತ್ತುವರೆದು ನಂತರ ಥಳಿಸಿದೆ. ಬಳಿಕ ಪೊಲೀಸರು ಆತನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದನು.